ಬಾಲಿವುಡ್ ನಟ ಅಜಯ್ ದೇವಗನ್ ಅವರ ಚಲನಚಿತ್ರ ರನ್ ವೇ 34ರಲ್ಲಿ ಬರುವ ಘಟನೆಯನ್ನು ಹೋಲುವ ನೈಜ ಘಟನೆ ಇತ್ತೀಚೆಗೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಕೂದಲೆಳೆ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ.
ತೀವ್ರ ಕೆಟ್ಟ ಹವಾಮಾನದಲ್ಲಿ ಸಿಲುಕಿದ್ದ ವಿಮಾನವನ್ನು ಒಬ್ಬ ಸಮರ್ಥ ಪೈಲಟ್ ಸುರಕ್ಷಿತವಾಗಿ ಇಳಿಸಲು ಪ್ರಯತ್ನಿಸುತ್ತಿರುವಾಗ ಪ್ರಯಾಣಿಕರು ತಮ್ಮ ಜೀವ ಉಳಿಸಿಕೊಳ್ಳಲು ಪ್ರಯತ್ನ ಪಡುವ ಸನ್ನಿವೇಶ ಆ ಸಿನಿಮಾದಲ್ಲಿದೆ. ಅದೇ ರೀತಿ ಭಾನುವಾರ ಸಂಜೆ ಸ್ಪೈಸ್ಜೆಟ್ನ ಎಸ್ ಜಿ- 945 ವಿಮಾನದಲ್ಲಿ ಸಂಭವಿಸಿದೆ.
ಸ್ಪೈಸ್ಜೆಟ್ನ ಮುಂಬೈ- ದುರ್ಗಾಪುರ ವಿಮಾನವು ಚಂಡಮಾರುತಕ್ಕೆ ಸಿಲುಕುವ ಅಪಾಯದಲ್ಲಿತ್ತು. ಹಾಗೂ ಹೀಗೂ ವಿಮಾನವು ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಈ ವೇಳೆ ರಕ್ಷಣೆಗಾಗಿ ನಡೆಸಿದ ಪ್ರಯತ್ನದಲ್ಲಿ ಕ್ಯಾಬಿನ್ನಲ್ಲಿದ್ದ ಲಗೇಜ್ಗಳು ಪ್ರಯಾಣಿಕರ ಮೇಲೆ ಬಿದ್ದ ಪರಿಣಾಮ ಕನಿಷ್ಠ 40 ಪ್ರಯಾಣಿಕರು ಗಾಯಗೊಂಡಿದ್ದಾರೆ.
BIG NEWS: ಹನುಮ ಜನ್ಮಭೂಮಿ ಅಂಜನಾದ್ರಿ ಮೇಲೆ ಕಾಂಗ್ರೆಸ್ ಕಣ್ಣು; ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ ಭಜರಂಗಿ ಜಪ
40 ಪ್ರಯಾಣಿಕರಲ್ಲಿ ಕನಿಷ್ಠ 10 ಮಂದಿಗೆ ಗಂಭೀರ ಗಾಯಗಳಾಗಿವೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಹತ್ತು ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಂಡಿಂಗ್ ಸಮಯದಲ್ಲಿ ತಲೆಗೆ ಗಾಯವಾದ ಪ್ರಯಾಣಿಕರೊಬ್ಬರು ಪ್ರತಿಕ್ರಿಯೆ ನೀಡಿದ್ದು, ವಿಮಾನದ ಸಿಬ್ಬಂದಿಯ ಸೂಚನೆ ಅನುಸರಿಸಿದ್ದು, ಆದರೂ ಸೀಟ್ ಬೆಲ್ಟ್ ಹರಿಯಿತು, ಲಗೇಜ್ ತಲೆಗೆ ಬಡಿಯಿತೆಂದು ಹೇಳಿದ್ದಾರೆ.
ಪ್ರಯಾಣಿಕರು ಬೊಂಬೆಯಂತೆ ಎಸೆಯಲ್ಪಟ್ಟರು, ಕೆಲವರು ತಮ್ಮ ಸೀಟಿನಿಂದ ಕೆಳಗೆ ಬಿದ್ದರು ಎಂದು ಮೊಹಮ್ಮದ್ ಇಕ್ಬಾಲ್ ಎಂಬ ಪ್ರಯಾಣಿಕರು ವಿವರಿಸಿದರು.
ಚಂಡಮಾರುತದ ಸಮೀಪಿಸುತ್ತಿರುವ ಬಗ್ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಪೈಲಟ್ಗೆ ತಿಳಿಸಿದ್ದರೇ ಎಂಬುದು ಇನ್ನೂ ಖಚಿತವಾಗಿಲ್ಲ.