ಉಕ್ರೇನ್-ರಷ್ಯಾ ಸಂಘರ್ಷದ ಕುರಿತು ವಾಸ್ತವದಲ್ಲಿ ಮತ್ತು ಆನ್‌ಲೈನ್‌ನಲ್ಲಿ ಹಲವು ಹಕ್ಕುಗಳು ಮತ್ತು ಪ್ರತಿಪಾದನೆಗಳನ್ನು ಮಾಡಲಾಗುತ್ತಿದೆ. ಈ ಬೆಳವಣಿಗೆಯ ಸುದ್ದಿಯನ್ನು ನಿಖರವಾಗಿ ವರದಿ ಮಾಡಲು WION ಸಾಕಷ್ಟು ಕಾಳಜಿ ವಹಿಸುತ್ತಿದೆ.
ಆದರೂ ಎಲ್ಲ ಹೇಳಿಕೆಗಳು, ಫೋಟೋಗಳು ಮತ್ತು ವೀಡಿಯೊಗಳ ದೃಢೀಕರಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಿಲ್ಲ. ಉಕ್ರೇನ್ ಯುದ್ಧದ ಮಧ್ಯೆ ಯುರೋಪ್ ಮೇಲೆ ಭಯಾನಕ ಪರಮಾಣು ದಾಳಿ ವಿಲಕ್ಷಣ ರೀತಿಯಲ್ಲಿ ನಡೆಯುತ್ತಿರುವ ಅನುಕರಣೆಯನ್ನು ರಷ್ಯಾ ಸರ್ಕಾರದ ಟಿವಿ ತೋರಿಸಿ, “ಬದುಕುಳಿದವರು ಯಾರೂ ಇರುವುದಿಲ್ಲ” ಎಂದು ಹೇಳಿದೆ. ಕೆಲವೇ ನಿಮಿಷಗಳಲ್ಲಿ ಬರ್ಲಿನ್, ಪ್ಯಾರಿಸ್ ಮತ್ತು ಲಂಡನ್‌ನಲ್ಲಿ ಪರಮಾಣು ದಾಳಿಗಳು ನಡೆಯಬಹುದು ಎಂದು ಈ ಶೋ ಹೇಳಿಕೊಂಡಿದೆ.
ರಷ್ಯಾದ ಜನಪ್ರಿಯ ಚಾನೆಲ್ ಒಂದರಲ್ಲಿ 60 ನಿಮಿಷಗಳ ಈ ಕಾರ್ಯಕ್ರಮ ಪ್ರಸಾರವಾಗಿದೆ ಎಂದು ವರದಿಯಾಗಿದೆ. ಫೆಬ್ರವರಿ 24ರಂದು “ವಿಶೇಷ ಮಿಲಿಟರಿ ಕಾರ್ಯಾಚರಣೆ”ಯನ್ನು ಘೋಷಿಸಿದ ಕೆಲವೇ ದಿನಗಳಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ತನ್ನ ಪರಮಾಣು ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿದ್ದರು.
BIG NEWS: ಹನುಮ ಜನ್ಮಭೂಮಿ ಅಂಜನಾದ್ರಿ ಮೇಲೆ ಕಾಂಗ್ರೆಸ್ ಕಣ್ಣು; ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ ಭಜರಂಗಿ ಜಪ
ಸರ್ಮತ್ ಎಂಬ ಖಂಡಾಂತರ ಕ್ಷಿಪಣಿಯನ್ನು ರಷ್ಯಾ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಘೋಷಿಸಿರುವ ಪುಟಿನ್, ಇದು ಶತ್ರುಗಳು “ಎರಡೆರಡು ಬಾರಿ ಯೋಚಿಸುವಂತೆ” ಮಾಡುತ್ತದೆ ಎಂದೂ ಹೇಳಿದ್ದಾರೆ.
ರಷ್ಯಾದ ರಕ್ಷಣಾ ಸಚಿವಾಲಯ ಹೇಳಿರುವಂತೆ, ಸರ್ಮತ್ ಖಂಡಾಂತರ ಕ್ಷಿಪಣಿಯು “ನಿಜವಾಗಿಯೂ ವಿಶಿಷ್ಟವಾದ ಅಸ್ತ್ರ. ಅದು ವಿಶ್ವದಲ್ಲೇ ಗರಿಷ್ಠ ಸಂಖ್ಯೆಯ ಗುರಿಗಳನ್ನು ನಾಶಪಡಿಸುವ ಶಕ್ತಿ ಹೊಂದಿದೆ” ಎಂದು ಪುಟಿನ್ ಪ್ರತಿಪಾದಿಸಿದ್ದಾರೆ. ಬಹುಸಂಖ್ಯೆಯ ಸಿಡಿತಲೆಗಳನ್ನು ಹೊಂದಿರುವ ಇದು ಕ್ಷಿಪಣಿ ವಿರೋಧಿ ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಬಲ್ಲದು.
ರಷ್ಯಾದ ಮುಂದಿನ ಪೀಳಿಗೆಯ “ಅಜೇಯ” ಅಸ್ತ್ರವಾಗಿ ಸರ್ಮತ್ ರೂಪುಗೊಂಡಿದೆ ಎಂದು ವರದಿಯಾಗಿದೆ. ಕಿಂಜಾಲ್ ಮತ್ತು ಅವಂಗಾರ್ಡ್ ಶಬ್ದಾತೀತ ಕ್ಷಿಪಣಿಗಳನ್ನೂ ರಷ್ಯಾ ಹೊಂದಿದೆ. ಈ ಪೈಕಿ ಕಿಂಜಾಲ್ ಶಬ್ದಾತೀತ ಕ್ಷಿಪಣಿಯನ್ನು ಉಕ್ರೇನ್ ವಿರುದ್ಧ ರಷ್ಯಾ ಈಗಾಗಲೇ ಬಳಸಿದೆ.