ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಹೊತ್ತಿಸಿದ ಕಿಡಿಗೆ ಬಿಹಾರದ ದರ್ಭಾಂಗ ವಿಮಾನ ನಿಲ್ದಾಣದ ಅಧಿಕಾರಿಗಳು ತುಪ್ಪ ಸುರಿದಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಜಾಗೃತಿ ಸಂದೇಶ ಸಾರುವ ಪೋಸ್ಟರ್ ಅನ್ನು ಅಂಟಿಸಲಾಗಿದ್ದು, ಅದನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಎಂಬುವರು ಫೋಟೋ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಈ ಪೋಸ್ಟರ್ ಸಂಪೂರ್ಣ ಹಿಂದಿಮಯವಾಗಿದ್ದು, ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಆವನೀಶ್ ಅವರು ಸಂದೇಶದಲ್ಲಿ ಸಂಪೂರ್ಣ ವ್ಯಾಕರಣ ದೋಷಗಳಿರುವುದನ್ನು ಕೆಂಪು ಶಾಯಿಯಲ್ಲಿ ಮಾರ್ಕ್ ಮಾಡಿ, “ನಮ್ಮ ಹಿಂದಿ ಭಾಷೆಯ ದುರ್ಗತಿ’’ ಎಂದು ಹೇಳಿದ್ದಾರೆ.
11 ವರ್ಷದ ನಂತರ ಶಿಕ್ಷಕರಿಗೆ ಸಿಕ್ಕಿದೆ ವಿದ್ಯಾರ್ಥಿಯ ಸಂದೇಶ….!
ಈ ಫೋಟೋ ವೈರಲ್ ಆಗಿದ್ದು, ಹಿಂದಿ ರಾಷ್ಟ್ರ ಭಾಷೆ ಎಂದು ವರಾತ ತೆಗೆದವರ ಪಟ್ಟಿಗೆ ಇದು ಸೇರಿದಂತಾಗಿದ್ದು, ಈಗಾಗಲೇ ಬಿಹಾರದಲ್ಲಿ ಭಾಷಾ ವಿಚಾರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಹಾರದ ಅನೇಕ ಜನರು ನಮ್ಮ ಭಾಷೆ ಹಿಂದಿಯಲ್ಲ, ಬಿಹಾರಿ. ನಾವು ನಮ್ಮ ಭಾಷೆಯನ್ನು ಬಿಟ್ಟುಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಲಾರಂಭಿಸಿದ್ದಾರೆ.