alex Certify 47 ಮಕ್ಕಳಿಗೆ ತಂದೆಯಾಗಿರುವ ಈ ವ್ಯಕ್ತಿಗೆ ಸಿಗುತ್ತಿಲ್ಲವಂತೆ ಸಂಗಾತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

47 ಮಕ್ಕಳಿಗೆ ತಂದೆಯಾಗಿರುವ ಈ ವ್ಯಕ್ತಿಗೆ ಸಿಗುತ್ತಿಲ್ಲವಂತೆ ಸಂಗಾತಿ…!

I gave sperm to the father of 47 children - but women don't want to dateವೀರ್ಯಾಣು ದಾನದ ಮೂಲಕ 47 ಮಕ್ಕಳಿಗೆ ತಂದೆಯಾಗಿರುವ ಅಮೆರಿಕದ ವ್ಯಕ್ತಿಯೊಬ್ಬರಿಗೆ ಇದೀಗ ಸಂಗಾತಿ ಹುಡುಕುವುದು ಕಷ್ಟವಾಗುತ್ತಿದೆಯಂತೆ.

ಅಮೆರಿಕಾದ ಗೋರ್ಡಿ ಎಂಬಾತನ ಬಳಿ ವೀರ್ಯಕ್ಕಾಗಿ ಮಹಿಳೆಯರು ಅವರನ್ನು ಸಂಪರ್ಕಿಸುತ್ತಾರೆ. ಆದರೆ, ಅವರೊಂದಿಗೆ ಡೇಟಿಂಗ್ ಮಾಡಲು ಮಾತ್ರ ಮಹಿಳೆಯರು ಆಸಕ್ತಿ ಹೊಂದಿಲ್ಲವಂತೆ.

30 ವರ್ಷ ವಯಸ್ಸಿನ ಗೋರ್ಡಿ ತನ್ನ 22ನೇ ವಯಸ್ಸಿನಲ್ಲಿ ವೀರ್ಯವನ್ನು ದಾನ ಮಾಡಲು ಪ್ರಾರಂಭಿಸಿದ್ದಾನೆ. ಈಗ ಪ್ರಪಂಚದಾದ್ಯಂತ 47 ಮಕ್ಕಳನ್ನು ಹೊಂದಿದ್ದಾನೆ. ಇನ್ನೂ 10 ಮಕ್ಕಳ ಆಗಮನದ ನಿರೀಕ್ಷೆಯಲ್ಲಿದ್ದಾನೆ.

ವೀರ್ಯಾಣು ದಾನ ಮಾಡಲು ಪ್ರಾರಂಭಿಸಿದ ನಂತರ ಅನೇಕ ಮಹಿಳೆಯರ ಆಸಕ್ತಿಯನ್ನು ನೋಡಿ ಆಶ್ಚರ್ಯವಾಯಿತು ಎಂದು ಗೋರ್ಡಿ ಹೇಳುತ್ತಾರೆ. ಈ ಮಹಿಳೆಯರು ಕೇವಲ ವೀರ್ಯ ಬ್ಯಾಂಕ್‌ಗೆ ಹೋಗಬಹುದಿತ್ತು. ಆದರೆ, ಅವರು ಮಗುವಿಗೆ ತಮ್ಮ ಜೈವಿಕ ತಂದೆಯನ್ನು ತಿಳಿದುಕೊಳ್ಳುವ ಆಯ್ಕೆಯನ್ನು ಬಯಸಿರುವುದಾಗಿ ಗೋರ್ಡಿ ತಿಳಿಸಿದ್ದಾರೆ.

ಗೋರ್ಡಿ ಅವರ ಬಗ್ಗೆ ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗೂ ಅವರ ಮಕ್ಕಳ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ. ಅವರು ಮಗುವನ್ನು ಹೊಂದಲು ಬಯಸುವ ಮಹಿಳೆಯರಿಗೆ ಮಾರ್ಗದರ್ಶನ ನೀಡುವ ‘ಬಿ ಪ್ರೆಗ್ನೆಂಟ್ ನೌ’ ಎಂಬ ಬ್ಲಾಗ್ ಅನ್ನು ಸಹ ನಡೆಸುತ್ತಿದ್ದಾರೆ.

ಗೋರ್ಡಿ ಅವರು ಹಲವಾರು ಮಹಿಳೆಯರಿಗೆ ತಮ್ಮ ಸ್ವಂತ ಕುಟುಂಬವನ್ನು ಪ್ರಾರಂಭಿಸಲು ಸಹಾಯ ಮಾಡಿದ್ದಾರೆ. ಅನೇಕ ಮಂದಿ ಮಹಿಳೆಯರು ನಿಯಮಿತವಾಗಿ ಅವರನ್ನು ಸಂಪರ್ಕಿಸುತ್ತಾರೆ.

ಅಷ್ಟೇ ಅಲ್ಲ, ಬರೋಬ್ಬರಿ 1,000 ಕ್ಕೂ ಹೆಚ್ಚು ಮಹಿಳೆಯರು ಇದುವರೆಗೆ ಅವರ ವೀರ್ಯವನ್ನು ಕೇಳಿದ್ದಾರೆ. ಗೋರ್ಡಿ ತನ್ನ ವೀರ್ಯ ದಾನವನ್ನು ಮಾಡುವ ಮೂಲಕ ಅವರಲ್ಲೇ ಯಾರಾದರೂ ಸಂಗಾತಿಯನ್ನು ಕಂಡುಕೊಳ್ಳಲು ಬಯಸಿದ್ದಾನೆ. ಆದರೆ, ಅವರ್ಯಾರು ಈತನೊಂದಿಗೆ ಡೇಂಟಿಗ್ ಮಾಡಲು ಮಾತ್ರ ಬಯಸಿಲ್ಲ. ಇದುವರೆಗೆ ಗೋರ್ಡಿ 500 ವೀರ್ಯಗಳನ್ನು ದಾನ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...