ಹೃದಯಸ್ಪರ್ಶಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ವಿಡಿಯೋವನ್ನು ವಧುವಿನ ಮೇಕಪ್ ಆರ್ಟಿಸ್ಟ್ ತನ್ನ ಇನ್ಸ್ಟಾಗ್ರಾಮ್ನ ಮೇಕಪ್ ಬೈನೀಟು ಆಂಟಿಲ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸಾವಿರಾರು ವೀಕ್ಷಣೆಗಳೊಂದಿಗೆ ರೀಲ್ ವೈರಲ್ ಆಗುತ್ತಿದೆ.
ಮದುವೆಯ ದಿನ ವರನಿಗೆ ವಧು ಸುಂದರವಾದ ಸರ್ಪ್ರೈಸ್ ನೀಡಿದ್ದಾಳೆ. ಅದ್ಭುತವಾದ ನೀಲಿ, ಗುಲಾಬಿ ಬಣ್ಣದ ಲೆಹೆಂಗಾವನ್ನು ವಧು ಧರಿಸಿದ್ದಾಳೆ. ಅವಳ ಪ್ರವೇಶವು ಬಹಳ ಸುಂದರವಾಗಿದೆ. ಮೊದಲಿಗೆ ಅಲ್ಲಿದ್ದ ಯುವತಿಯರು ದುಪ್ಪಟ್ಟಾಗಳಿಂದ ವಧುವನ್ನು ಮುಚ್ಚಿದ್ದಾರೆ. ದುಪ್ಪಟ್ಟಾ ತೆರೆದಾಗ ಎದುರು ಬಂದ ವಧು, ವರನಿಗಾಗಿ ನೃತ್ಯ ಮಾಡುತ್ತಾಳೆ. ಈ ವೇಳೆ ವರ ಕಣ್ಣೀರು ಸುರಿಸಿದ್ದಾನೆ. ಮೋಹಿತ್ ಚೌಹಾಣ್ ಅವರ ರಂಗ್ ಲಗೇಯಾ ಹಾಡನ್ನು ವಿಡಿಯೋದಲ್ಲಿ ಕೇಳಬಹುದು.
ತನ್ನ ಜೀವನದ ಪ್ರೀತಿಪಾತ್ರಳನ್ನು ನೋಡುತ್ತಿದ್ದಂತೆ, ವರನ ಕಣ್ಣಲ್ಲಿ ನೀರು ಜಿನುಗಿದೆ. ಆಕೆ ಮುಂದಕ್ಕೆ ಬಂದು ವರನಿಗಾಗಿ ನೃತ್ಯ ಮಾಡುವಾಗ ಅವನು ತನ್ನ ಕಣ್ಣೀರನ್ನು ತಡೆದುಕೊಳ್ಳಲು ಸಾಧ್ಯವಾಗಿಲ್ಲ. ತನ್ನ ಸುಂದರ ವಧು ಪೂಜಾಳನ್ನು ನೋಡಿದ ವರ ಆಯುಷ್ ಜೈನ್ ಅಳುತ್ತಾ ಕಣ್ಣೀರು ಒರೆಸಿದ್ದಾನೆ. ಅವನು ಕಣ್ಣೀರು ಸುರಿಸಿದಾಗ ಅವನ ಮುಖವು ಗುಲಾಬಿ ಎಸಳಿನಂತೆ ಕೆಂಪಾಗಿದೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಕಾಮೆಂಟ್ ವಿಭಾಗದಲ್ಲಿ ಹೃದಯದ ಎಮೋಜಿಗಳನ್ನು ತುಂಬಿದ್ದಾರೆ.