ವಿಶ್ವದ ಜನಸಂಖ್ಯೆಯಲ್ಲಿ ಸುಮಾರು 84 ಪ್ರತಿಶತದಷ್ಟು ಜನರು ಈಗ ಸ್ಮಾರ್ಟ್‌ಫೋನ್ ಹೊಂದಿದ್ದಾರೆ. ಸ್ಮಾರ್ಟ್‌ಫೋನ್ ಇಲ್ಲದೆ ಬದುಕುವುದೇ ಅಸಾಧ್ಯ ಎಂಬಂತಹ ಸ್ಥಿತಿ ಈಗ ನಿರ್ಮಾಣವಾಗಿದೆ. ಈ ಅವಲಂಬನೆಯೇ ಹ್ಯಾಕರ್‌ಗಳಿಗೆ ಮೋಸ ಮಾಡಲು ಹೊಸ ಮಾರ್ಗವನ್ನು ಕಲ್ಪಿಸಿಕೊಡ್ತಾ ಇದೆ.
ಕಳೆದ ವರ್ಷ ಮೊಬೈಲ್ ಫೋನ್ ಬಳಕೆದಾರರ ಮೇಲೆ ಸುಮಾರು 3.5 ಮಿಲಿಯನ್ ದುರುದ್ದೇಶಪೂರಿತ ದಾಳಿಗಳನ್ನು ನಡೆದಿರುವುದನ್ನು ಸೈಬರ್ ಭದ್ರತಾ ಕಂಪನಿ ಕ್ಯಾಸ್ಪರ್ಸ್ಕಿ ಪತ್ತೆಹಚ್ಚಿದೆ. ಎಸ್‌ಎಂಎಸ್ ಅಥವಾ ಇಮೇಲ್ ಮೂಲಕ ಬರುವ ಸ್ಪಾಮ್ ಮೆಸೇಜ್‌ಗಳು ಸಾಮಾನ್ಯವಾಗಿ ವೈರಸ್‌ಗಳಿಗೆ ಲಿಂಕ್‌ಗಳನ್ನು ಒಳಗೊಂಡಿರುತ್ತವೆ.
ಇದು ಒಂದು ಬಗೆಯ ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿರುತ್ತದೆ. ಈ ರೀತಿ ಮಾಲ್‌ವೇರ್‌ಗೆ ನಿಮ್ಮ ಫೋನ್ ತುತ್ತಾಗಿದೆ ಅನ್ನೋದು ಬಹಳ ಸಮಯದವರೆಗೂ ನಿಮ್ಮ ಅರಿವಿಗೆ ಬಾರದೇ ಇರಬಹುದು. ಖಾಸಗಿ ಕಂಪನಿ ಜಿಂಪೇರಿಯಮ್ ವರದಿಯ ಪ್ರಕಾರ, ಐದರಲ್ಲಿ ತಲಾ ಒಂದು ಮೊಬೈಲ್ ಈ ರೀತಿಯ ಮಾಲ್‌ವೇರ್‌ಗಳಿಗೆ ತುತ್ತಾಗಿದೆ.
ವಿಶ್ವದಾದ್ಯಂತ ಹತ್ತು ಮೊಬೈಲ್‌ಗಳಲ್ಲಿ ಕನಿಷ್ಟ ನಾಲ್ಕು ಸೈಬರ್ ದಾಳಿಗೆ ಗುರಿಯಾಗುತ್ತವೆ. ಕಂಪ್ಯೂಟರ್‌ಗಳಂತೆ ಮೊಬೈಲ್ ಫೋನ್‌ಗಳು ಕೂಡ ಮಾಲ್ವೇರ್‌ಗೆ ತುತ್ತಾಗುತ್ತವೆ. ಉದಾಹರಣೆಗೆ ಹಮ್ಮಿಂಗ್‌ಬಾದ್ ವೈರಸ್ 2016 ರಲ್ಲಿ ಕೆಲವೇ ತಿಂಗಳುಗಳಲ್ಲಿ ಹತ್ತು ಮಿಲಿಯನ್ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಇನ್ಫೆಕ್ಟ್ ಆಗಿತ್ತು, 85 ಮಿಲಿಯನ್ ಡಿವೈಸ್‌ಗಳನ್ನು ಇದು ಅಪಾಯಕ್ಕೆ ಸಿಲುಕಿಸಿದೆ.
ಫೋನ್ ವೈರಸ್ ಕೂಡ ಕಂಪ್ಯೂಟರ್ ವೈರಸ್‌ನಂತೆಯೇ ಕಾರ್ಯನಿರ್ವಹಿಸುತ್ತದೆ. ದುರುದ್ದೇಶಪೂರಿತ ಕೋಡ್ ನಿಮ್ಮ ಡಿವೈಸ್‌ಗೆ ಇನ್ಫೆಕ್ಟ್ ಮಾಡುತ್ತದೆ. ನಿಮ್ಮ ಕಾಂಟಾಕ್ಟ್‌ನಲ್ಲಿರೋ ಇತರರಿಗೆ ಸ್ವಯಂ ಎಸ್‌ಎಂಎಸ್ ಕಳಿಸಬಹುದು, ಅಥವಾ ಇಮೇಲ್‌ಗಳನ್ನು ಸ್ವಯಂ-ಫಾರ್ವರ್ಡ್ ಮಾಡುವ ಸಾಧ್ಯತೆ ಇರುತ್ತದೆ. ಈ ಮೂಲಕ ಇತರ ಡಿವೈಸ್‌ಗಳಿಗೂ ವೈರಸ್ ಹರಡುತ್ತದೆ.
ಇಂತಹ ವೈರಸ್ ಅಟ್ಯಾಕ್‌ಗಳಿಂದ ಸೇಫ್ ಆಗಿರುವ ಫೋನ್ ಯಾವುದು ಅನ್ನೋ ಪ್ರಶ್ನೆ ಮೂಡಬಹುದು. ಆಂಡ್ರಾಯ್ಡ್ ಫೋನ್‌ಗಳಿಗಿಂತ ಐಫೋನ್‌ಗಳಲ್ಲಿ ಸೇಫ್ಟಿ ಹೆಚ್ಚು. ಅಷ್ಟು ಸುಲಭವಾಗಿ ಐಫೋನ್ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಹೊರತಾಗಿ ಬೇರೆ ಕಡೆಯಿಂದ ಆಪ್‌ಗಳನ್ನು ಡೌನ್ಲೋಡ್ ಮಾಡಿಕೊಂಡರೆ ಮಾಲ್ವೇರ್ ಅಪಾಯ ಹೆಚ್ಚು.
ನಿಮ್ಮ ಫೋನ್ ಮಾಲ್ವೇರ್‌ಗೆ ತುತ್ತಾಗಿದ್ಯಾ ಅನ್ನೋದನ್ನು ಪತ್ತೆ ಮಾಡೋದು ಸುಲಭದ ಕೆಲಸವಲ್ಲ. ಅಪ್ಲಿಕೇಶನ್‌ಗಳು ತೆರೆಯಲು ಸಾಮಾನ್ಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡರೆ, ಕಳಪೆ ಕಾರ್ಯಕ್ಷಮತೆ ಅಥವಾ ಇದ್ದಕ್ಕಿದ್ದಂತೆ ಫೋನ್ ಕ್ರಾಶ್ ಆದರೆ ಮಾಲ್ವೇರ್‌ಗೆ ತುತ್ತಾಗಿದೆ ಎಂದರ್ಥ. ಬೇಗನೆ ಬ್ಯಾಟರಿ ಡೌನ್ ಆಗುವುದು, ಹೆಚ್ಹೆಚ್ಚು ಡೇಟಾ ಖಾಲಿಯಾಗುವುದು ಕೂಡ ಮಾಲ್ವೇರ್‌ನ ಸಂಕೇತವಾಗಿದೆ.
ನಿಮ್ಮ ಡಿವೈಸ್‌ಗೆ ವೈರಸ್ ತಗುಲಿದೆ ಎಂಬ ಅನುಮಾನವಿದ್ದರೆ ಮೊದಲು ನೀವು ಮಾಲ್ವೇರ್ ಅನ್ನು ತೆಗೆದುಹಾಕಬೇಕಾಗುತ್ತದೆ. ವೈರಸ್ ಅನ್ನು ಪತ್ತೆ ಮಾಡಲು ಫೋನ್ ಸ್ಕ್ಯಾನ್ ಮಾಡಬೇಕು. ಇದಕ್ಕಾಗಿ ವಿಶ್ವಾಸಾರ್ಹ ಆಂಟಿವೈರಸ್ ಅಪ್ಲಿಕೇಶನ್ ಬಳಸಿ. Avast, AVG, Bitdefender, McAfee ಅಥವಾ Norton ಇವುಗಳನ್ನು ಕೂಡ ಬಳಕೆ ಮಾಡಿಕೊಳ್ಳಬಹುದು. ನಿಮ್ಮ ಫೋನ್‌ನ ಸ್ಟೋರೇಜ್, ಬ್ರೌಸಿಂಗ್ ಹಿಸ್ಟರಿ, ಕ್ಯಾಚೆ ಎಲ್ಲವನ್ನೂ ಕ್ಲಿಯರ್ ಮಾಡಿ. ನಿಮ್ಮ iPhone ಅಥವಾ Android ಫೋನ್ ಅನ್ನು ರಿಸ್ಟಾರ್ಟ್ ಮಾಡಿ.
ಇದು Android ನಲ್ಲಿನ ವೈಶಿಷ್ಟ್ಯವಾಗಿದ್ದು ಅದು ಸಕ್ರಿಯವಾಗಿರುವವರೆಗೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್‌ಗಳನ್ನು ಕಾರ್ಯನಿರ್ವಹಿಸದಂತೆ ತಡೆಯುತ್ತದೆ. ಡೌನ್‌ಲೋಡ್ ಮಾಡಿದ ಅಪ್ಲಿಕೇಶನ್‌ಗಳ ಪಟ್ಟಿಯಲ್ಲಿ ಯಾವುದಾದರೂ ಅನುಮಾನಾಸ್ಪದವೆನಿಸಿದರೆ ಅದನ್ನು ಡಿಲೀಟ್ ಮಾಡಿ. ನಂತರ ಸೇಫ್ ಮೋಡ್ ಅನ್ನು ಆಫ್ ಮಾಡಿಬಿಡಿ. ಕೊನೆಯಲ್ಲಿ ಎಲ್ಲಾ ಡೇಟಾವನ್ನು ಬ್ಯಾಕಪ್ ಮಾಡಿಕೊಂಡು, ಫ್ಯಾಕ್ಟರಿ ರಿಸೆಟ್ ಮಾಡಬಹುದು. ಫ್ಯಾಕ್ಟರಿ ರಿಸೆಟ್ ಮಾಡುವುದರಿಂದ ಮಾಲ್ವೇರ್ ಅನ್ನು ತಡೆಗಟ್ಟಬಹುದು.
ಇಂತಹ ವೈರಸ್‌ಗಳನ್ನು ತಡೆಯಲು ಅಸಹಜ ಎಸ್‌ಎಂಎಸ್, ನೋಟಿಫಿಕೇಶನ್, ಪಾಪ್ ಅಪ್ಸ್, ಇಮೇಲ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಮಾತ್ರ ಅಪ್ಲಿಕೇಶನ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ. ಫೋನ್ ಅನ್ನು ಮಾಡಿಫೈ ಮಾಡಬೇಡಿ. ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವ ಮುನ್ನ ಸರಿಯಾಗಿ ಗಮನಿಸಿ. ನಿಯಮಿತವಾಗಿ ಡೇಟಾ ಬ್ಯಾಕಪ್ ಮಾಡಿಕೊಳ್ಳಿ. ನಿಮ್ಮ ಮೊಬೈಲ್‌ನ ಸಾಫ್ಟ್‌ವೇರ್ ಅನ್ನು ಆಗಾಗ ಅಪ್ಡೇಟ್ ಮಾಡಿದ್ರೆ ಇಂತಹ ಮಾಲ್‌ವೇರ್ ಅನ್ನು ತಡೆಯಬಹುದು.