ಕಲಬುರಗಿ: 545 ಪಿಎಸ್ಐ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಮಂಜುನಾಥ ಮೇಳಕುಂದಿ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.
ಆರೋಗ್ಯ ಸರಿ ಇರಲಿಲ್ಲ. ಮಂಗಳೂರಿಗೆ ಹೋಗಿದ್ದೆ, ಇವತ್ತು ಕಲಬುರ್ಗಿಗೆ ಬಂದಿದ್ದೇನೆ ಎಂದು ಹೇಳಿರುವ ಮಂಜುನಾಥ ಮೇಳಕುಂದಿ ಕಲಬುರಗಿಯ ಐವಾನ್ ಐ ಶಾಹಿ ಗೆಸ್ಟ್ ಹೌಸ್ ನಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾನೆ.
ಮಂಜುನಾಥ ಮೇಳಕುಂದಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪಿತನಾಗಿದ್ದಾನೆ. ಈತನ ಬಂಧನಕ್ಕೆ ಸಿಐಡಿ ಪೊಲೀಸರು ಬಲೆ ಬೀಸಿದ್ದರು. ತಲೆಮರೆಸಿಕೊಂಡಿದ ಆರೋಪಿ ಆಟೋದಲ್ಲಿ ಬ್ಯಾಗ್ ಸಮೇತ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ.