alex Certify 13,000 ಅಡಿ ಫ್ರೀಫಾಲ್ ವೇಳೆ ರೂಬಿಕ್ಸ್ ಪಝಲ್ ಸಾಲ್ವ್ ಮಾಡಿದ ಸ್ಕೈ ಡೈವರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

13,000 ಅಡಿ ಫ್ರೀಫಾಲ್ ವೇಳೆ ರೂಬಿಕ್ಸ್ ಪಝಲ್ ಸಾಲ್ವ್ ಮಾಡಿದ ಸ್ಕೈ ಡೈವರ್…!

ಮುಂಬೈ: ಸ್ಕೈಡೈವರ್ ಒಬ್ಬ 13,000 ಅಡಿ ಎತ್ತರದಲ್ಲಿ ವಿಮಾನದಿಂದ ಫ್ರೀಫಾಲ್ ಸಂದರ್ಭದಲ್ಲೇ ದಾಖಲೆಯ ಸಮಯದಲ್ಲಿ ರೂಬಿಕ್ಸ್ ಪಝಲ್ ಬಿಡಿಸಿದ ಅಚ್ಚರಿಯ ವಿದ್ಯಮಾನ ನಡೆದಿದೆ.

ಚಿನ್ಮಯ್ ಪ್ರಭು ಎಂಬ ಸ್ಕೈಡೈವರ್ ರೂಬಿಕ್ಸ್ ಕ್ಯೂಬ್‌ನ ಟೆಟ್ರಾಹೆಡ್ರನ್ ಆವೃತ್ತಿಯಾಗಿರುವ ಪೈರನ್ ಮಿಂಕ್ಸ್ ಅನ್ನು ಕೇವಲ 30 ನಿಮಿಷಗಳಲ್ಲಿ ಸಾಲ್ವ್ ಮಾಡಿದರು. ಥೈಲ್ಯಾಂಡ್‌ನಲ್ಲಿ ಏ. 14ರಂದು ವಿಮಾನದಿಂದ 13,000 ಅಡಿ ಎತ್ತರದಲ್ಲಿ ಫ್ರೀಫಾಲ್ ನಡೆಸುತ್ತಿದ್ದ ಸಂದರ್ಭದಲ್ಲಿ ಅವರು ಈ ಸಾಹಸ ಕೈಗೊಂಡಿದ್ದಾರೆ.

BIG NEWS: ಹಾಲಿ ಶಾಸಕರು, ಕುಟುಂಬ ರಾಜಕಾರಣ ಹೊರಗಿಟ್ಟು ಚುನಾವಣೆ ಎದುರಿಸುತ್ತೇವೆ; BJP ನಾಯಕರಿಗೆ ಶಾಕ್ ಕೊಟ್ಟ ಬಿ.ಎಲ್.ಸಂತೋಷ್ ಹೇಳಿಕೆ

ಮುಂಬಯಿಯ ಈ ಯುವ ಸ್ಕೈ ಡೈವರ್ ಫ್ರೀಫಾಲ್ ವೇಳೆ ಕೇವಲ 24.22 ಸೆಕೆಂಡ್‌ಗಳಲ್ಲಿ ಪಝಲ್ ಸಾಲ್ವ್ ಮಾಡಿರುವುದು ಗಿನ್ನಿಸ್ ವಿಶ್ವ ದಾಖಲೆಯಾಗಿದೆ. ಗಾಳಿಯ ಒತ್ತಡವಿದ್ದರೂ ದಾಖಲೆಯ ಸಮಯದಲ್ಲಿ ಅದನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಪ್ಯಾರಾಚ್ಯೂಟ್‌ ಬಿಡಿಸಿ, ಒಂದೇ ರೀತಿಯ ಬಣ್ಣಗಳು ಜೋಡಣೆಯಾಗಿರುವ ಬದಿಗಳನ್ನು ತೋರಿಸುತ್ತ, ಕ್ಯಾಮೆರಾ ನೋಡಿ ನಕ್ಕಿರುವ ವಿಡಿಯೋ ಭಾರೀ ಜನಪ್ರಿಯವಾಗಿದೆ. ಇದಲ್ಲದೆ, ಈ ಸ್ಕೈಡೈವರ್ ನೀರಿನೊಳಗೆ 48 ಸೆಕೆಂಡ್‌ಗಳಲ್ಲಿ, ಬೈಕ್ ಓಡಿಸುತ್ತ ಒಂದು ಗಂಟೆ ಮತ್ತು ಏಳು ನಿಮಿಷಗಳಲ್ಲಿ ಪೈರಾಮಿಂಕ್ಸ್ ಪಝಲ್‌ಗಳನ್ನು ಸಾಲ್ವ್ ಮಾಡಿದ್ದಾರೆ. ಇವೂ ಗಿನ್ನಿಸ್ ದಾಖಲೆಯ ಪುಟಗಳನ್ನು ಸೇರಿವೆ.

ಅದೇ ರೀತಿ ತಮಿಳುನಾಡಿನ ಬಾಲಕ ಜಯದರ್ಶನ್ ವೆಂಕಟೇಸನ್ ಎಂಬಾತ ಬೈಕ್ ಓಡಿಸುತ್ತಿರುವಾಗಲೇ ದಾಖಲೆಯ ಸಮಯದಲ್ಲಿ ರೊಟೇಟಿಂಗ್ ಪಝಲ್ ಸಾಲ್ವ್ ಮಾಡಿದ್ದಾನೆ. ಕ್ಯೂಬ್ ಅನ್ನು ಸಾಲ್ವ್ ಮಾಡಲು ಆತ ತೆಗೆದುಕೊಂಡ ಸಮಯ ಕೇವಲ 14.32 ಸೆಕೆಂಡ್‌ಗಳು.

ಅಮೆರಿಕದ ಹದಿಹರೆಯದ ಬಾಲಕ ಟಾಮಿ ಚೆರ್ರಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 14.67 ಸೆಕೆಂಡ್‌ಗಳಲ್ಲಿ ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡಿದ್ದೂ ದಾಖಲೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...