ಇದೀಗ ದೆಹಲಿಯಲ್ಲಿ ಒಂದೆಡೆ 40 ರಿಂ 42 ಕ್ಕೆ ಏರುತ್ತಿರುವ ತಾಪಮಾನ……ಇನ್ನೊಂದೆಡೆ ವಿದ್ಯುತ್ ಬಿಕ್ಕಟ್ಟು……ಒಟ್ಟಿನಲ್ಲಿ ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆ ಜನ ತತ್ತರಿಸಿದ್ದಾರೆ. ಈ ನಡುವೆ ವಿದ್ಯುತ್ ಇಲ್ಲದ ಕಾರಣ ನಾನು ಸೊಳ್ಳೆ ಹೊಡೆಯುತ್ತಾ ಕೂತಿದ್ದೇನೆ ಎಂದು ಕೇಜ್ರಿವಾಲ್ ಸರ್ಕಾರದ ವಿರುದ್ಧ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ ಅವರಿಗೆ ಟ್ವಿಟರ್ ನಲ್ಲಿ ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆ ಸಿಕ್ಕಿದೆ.
ಮಧ್ಯಪ್ರದೇಶ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಇವರು, ನಾನು ದೆಹಲಿಯಲ್ಲಿದ್ದೇನೆ. ಒಂದು ಗಂಟೆಯಿಂದ ವಿದ್ಯುತ್ ಇಲ್ಲ. ಕಿಟಕಿ ತೆರೆದರೆ ಗಾಳಿಯ ಜೊತೆ ಸೊಳ್ಳೆಗಳು ಬರುತ್ತಿವೆ. ಕತ್ತಲೆಯಲ್ಲಿ ಸೊಳ್ಳೆಗಳನ್ನು ಸಾಯಿಸುತ್ತಿದ್ದೇನೆ. ಎಷ್ಟು ಸೊಳ್ಳೆಗಳನ್ನು ಕೊಂದೆ ಎಂದು ಬೆಳಿಗ್ಗೆ ಹೇಳುತ್ತೇನೆ. ಉಚಿತ ವಿದ್ಯುತ್ ನೀಡುವ ಸರ್ಕಾರಕ್ಕೆ ನಮಸ್ಕಾರ ಎಂದು ಟ್ವೀಟ್ ಮಾಡಿದ್ದರು.
ಅನುಕಂಪದ ನೌಕರಿ ಬಗ್ಗೆ ಸರ್ಕಾರದ ಮಹತ್ವದ ಆದೇಶ, 2ನೇ ಪತ್ನಿ ಮಕ್ಕಳಿಗೂ ಉದ್ಯೋಗ
ವಿಜಯ್ ಅವರ ಟ್ವೀಟನ್ನು 19 ಸಾವಿರ ಮಂದಿ ಇಷ್ಟಪಟ್ಟಿದ್ದು, 2800 ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. ಬಹಳಷ್ಟು ಮಂದಿ ನೀವು ಎಷ್ಟು ಸೊಳ್ಳೆ ಹೊಡೆದಿದ್ದೀರಿ ಎಂಬುದನ್ನು ಬೆಳಿಗ್ಗೆ ನಮಗೆ ತಿಳಿಸಿ ಎಂದು ಕೇಳಿದ್ದಾರೆ. ಅದರಲ್ಲಿ ಒಬ್ಬ ಬಳಕೆದಾರ, ನಾನು ಉತ್ತರ ಪ್ರದೇಶದವನು. ಪ್ರತಿನಿತ್ಯ ಗಂಟೆಗಟ್ಟಲೆ ವಿದ್ಯುತ್ ವ್ಯತ್ಯಯವಾಗುತ್ತಿದೆ. ಕಿಟಕಿ ತೆರೆದಾಗ ಸೊಳ್ಳೆಗಳು ಗಾಳಿಯೊಂದಿಗೆ ಕೋಣೆಗೆ ಪ್ರವೇಶಿಸುತ್ತವೆ ಮತ್ತು ಹೊರಗೆ ಹೋದರೆ ನಮಗೆ ಬಿಡಾಡಿ ದನಗಳು ಎದುರಾಗುತ್ತವೆ ಎಂದು ಹೇಳಿದ್ದಾರೆ.
ಮತ್ತೊಬ್ಬ ಬಳಕೆದಾರ, ಗುರ್ ಘಾಂವ್ ನಲ್ಲಿ 10-12 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವಾಗುತ್ತಿದೆ. ಬೇರೆ ರಾಜ್ಯಗಳನ್ನು ದೂಷಿಸುವ ಮೊದಲು ನಿಮ್ಮ ಪಕ್ಷ ಆಳುತ್ತಿರುವ ರಾಜ್ಯಗಳನ್ನು ನೋಡಿ ಎಂದು ಹೇಳಿದ್ದಾರೆ.