ಇತ್ತೀಚಿನ ದಿನಗಳಲ್ಲಿ ಮಾಂಸಕ್ಕೆ ಬೇಡಿಕೆ ಶುರುವಾಗಿದೆ. ಆದರೆ ಅತಿಯಾದ ಮಾಂಸ ಸೇವನೆಯಿಂದ ಪರಿಸರ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಅಧ್ಯಯನವೊಂದು ಎಚ್ಚರಿಸಿದೆ.
ಉತ್ತರ ಅಮೇರಿಕಾ, ಓಷಿಯಾನಿಯಾ ಮತ್ತು ಯುರೋಪ್‌ನ ರಾಷ್ಟ್ರಗಳು ಮಾಂಸವನ್ನು ಹೆಚ್ಚು ಸೇವಿಸುವ ರಾಷ್ಟ್ರಗಳಾಗಿದ್ದು, ಜಾಗತಿಕವಾಗಿ ಶೇ 75 ರಷ್ಟು ಮಾಂಸ ಸೇವನೆ ಕಡಿತಗೊಂಡರೆ ಹವಾಮಾನ ವೈಪರೀತ್ಯ ಎದುರಾಗದಂತೆ ಎಚ್ಚರ ವಹಿಸಲು ಸಣ್ಣ ಕೊಡುಗೆ ನೀಡಿದಂತಾಗುತ್ತದೆ ಎನ್ನುತ್ತದೆ ಅಧ್ಯಯನ.
ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಆಹಾರ ಬಡಿಸುವ ವೃದ್ಧದಂಪತಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ಬಾನ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ ಮ್ಯಾಟಿನ್ ಕ್ವೈಮ್ ಬರೆದ ಲೇಖನದ ಪ್ರಕಾರ, ಯೂರೋಪಿಯನ್ನರು ಅಥವಾ ಉತ್ತರ ಅಮೆರಿಕನ್ನರಂತೆ ಮಾಂಸ ಸೇವಿಸಿದರೆ ಪರಿಸರ ವ್ಯವಸ್ಥೆ ಹಾಳುಗೆಡುವುತ್ತದೆ. ಹವಾಮಾನದ ಹಾನಿಗೆ ನಾವೇ ನೇರ ಕಾರಣರಾಗುತ್ತೇವೆ ಎಂದು ಹೇಳುತ್ತದೆ
ಅಲ್ಲದೇ ನಮ್ಮ ಮಾಂಸಾಹಾರ ಸೇವನೆಯನ್ನು ವರ್ಷಕ್ಕೆ ಅರ್ಧದಷ್ಟು ಅಥವಾ 20 ಕೆಜಿಯಷ್ಟು ಕಡಿಮೆ ಮಾಡಬೇಕು ಎನ್ನುತ್ತದೆ ಕ್ವಿಮ್ ವರದಿ. ಇನ್ನು ಸಂಪನ್ಮೂಲ ಅರ್ಥಶಾಸ್ತ್ರದ ವಾರ್ಷಿಕ ವಿಮರ್ಶೆ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನ ಪ್ರಕಾರ, 2050 ರವರೆಗೂ ಮಾಂಸಕ್ಕೆ ಹೆಚ್ಚಿನ ಬೇಡಿಕೆ ಇರಲಿದೆ. ಅತಿಯಾದ ಮಾಂಸ ಸೇವನೆಯು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬ ವಾಸ್ತವದ ಹೊರತಾಗಿಯೂ, ಬೇಡಿಕೆಯು ಹೆಚ್ಚಾಗುತ್ತಲೇ ಇರುತ್ತದೆ. ಅಲ್ಲದೇ ಇದು ಅರಣ್ಯ ನಾಶ ಮತ್ತು ಜೀವವೈಧ್ಯತೆಯ ನಷ್ಟಕ್ಕೂ ಮೂಲ ಕಾರಣವಾಗುತ್ತದೆ ಎಂದು ತಿಳಿಸಿದೆ.