ಬೆಂಗಳೂರು: ಇಲಾಖಾವಾರು ಸಾರ್ವತ್ರಿಕ ವರ್ಗಾವಣೆಗೆ ಸರ್ಕಾರ ಮುಂದಾಗಿದ್ದು, ಮೇ 1 ರಿಂದ 15 ರವರೆಗೆ ಸಾರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಲಾಗಿದೆ.
ಆಯಾ ಇಲಾಖೆ ಸಚಿವರಿಗೆ ವರ್ಗಾವಣೆಯ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಲಾಗಿದೆ. ಗ್ರೂಪ್ ಎ,ಬಿ,ಸಿ, ಮತ್ತು ಗ್ರೂಪ್ ಡಿ ನೌಕರರ ವರ್ಗಾವಣೆಗೆ ಸುತ್ತೋಲೆ ಹೊರಡಿಸಲಾಗಿದೆ.
ನೌಕರರ ಸಾರ್ವತ್ರಿಕ ವರ್ಗಾವಣೆ ಗೆ ಸರ್ಕಾರ ಅವಕಾಶ ಕಲ್ಪಿಸಿದ್ದು, ಮೇ 1 ರಿಂದ 15 ರವರೆಗೆ ಜೇಷ್ಠತಾ ಪಟ್ಟಿಯ ಪ್ರಕಾರ ಶೇಕಡ 6 ರಷ್ಟು ಮೀರದಂತೆ ವರ್ಗಾವಣೆ ಮಾಡಲಾಗುವುದು. ಶೇ. 6 ರಷ್ಟು ಷರತ್ತುಬದ್ಧ ವರ್ಗಾವಣೆಗೆ ಅನುಮತಿ ನೀಡಲಾಗಿದೆ.