ಇದೊಂದು ಮನಮುಟ್ಟುವ ಕಥೆ. ಬದುಕಿನಲ್ಲಿ ಸಾರ್ಥಕತೆ ಮೆರೆದ ಪುಟ್ಟ ಮಗುವಿನ ಕಥೆ. ಐದು ವರ್ಷದ ಮಗುವಿಗೆ ಆಟ, ತುಂಟಾದ ಹೊರತಾಗಿ ಬೇರೆ ಜಗತ್ತು ಗೊತ್ತಿರುವುದಿಲ್ಲ. ಆದರೆ ಇಲ್ಲೊಂದು ಮಗು ಐದು ವರ್ಷಕ್ಕೆ ತನ್ನ ಅಂಗಾಂಗಗಳನ್ನು ದಾನ ಮಾಡಿ ತನ್ನ ಬದುಕಿಗೊಂದು ಅರ್ಥ ಕೊಟ್ಟಿದ್ದಾಳೆ. ಹೌದು ಆ ಮಗುವೇ ನೋಯ್ಡಾದ ರೋಲಿ.
ಈಕೆಯ ತಲೆಗೆ ಗುಂಡು ತಗುಲಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ವೈದ್ಯರು ಬೆರಳು, ಹಲ್ಲಿನ ಪರೀಕ್ಷೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೆದುಳಿನ ಮೂಳೆಗೆ ಗಂಭೀರವಾದ ಗಾಯವಾದ ಕಾರಣ ಆಕೆಯ ಮೆದುಳು ನಿಸ್ತೇಜನಗೊಂಡಿತ್ತು. ಇದನ್ನರಿತ ವೈದ್ಯರು ಆಕೆಯ ಅಂಗಾಂಗ ದಾನ ಮಾಡುವಂತೆ ಕೋರಿದ್ದಾರೆ.
Big News: ತಾಂಜೇನಿಯನ್ ಸೆನ್ಸೇಷನ್ ಕಿಲಿ ಪೌಲ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಅಂಗಾಂಗ ದಾನದ ಬಗ್ಗೆ ನಿರಾಕರಿಸಿದ ರೋಲಿ ತಂದೆ ಹರಿನಾರಾಯಣ್ ಮತ್ತು ತಾಯಿ ಕೊನೆಗೆ ಒಪ್ಪಿಕೊಂಡು ನನಗೆ ಆದ ನೋವು ಇನ್ನು ಬೇರೆ ತಂದೆ – ತಾಯಿಗೆ ಆಗುವುದು ಬೇಡ ಎಂದು ಹೇಳಿ ಮಗುವಿನ ಅಂಗಾಂಗಗಳನ್ನು ದಾನ ಮಾಡಿದ್ದಾರೆ. ಕೊನೆಗೆ ರೋಲಿ ಅಂಗಾಂಗಗಳಿಂದ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಕ್ಕಳು ಜೀವ ಪಡೆದುಕೊಂಡಿದ್ದಾರೆ. ಈ ಮೂಲಕ ಸಾವಿನಲ್ಲೂ ಮಾನವೀಯತೆ, ಸಾರ್ಥಕತೆ ಮೆರೆದ ರೋಲಿ ಎಲ್ಲರಿಗೂ ಮಾದರಿಯಾಗಿದ್ದಾಳೆ.