ತಾಯಿ ದುರ್ಗೆ ಹಿಂದೂಗಳ ಪ್ರಮುಖ ದೇವತೆಗಳಲ್ಲಿ ಒಬ್ಬಳು. ದುರ್ಗೆಯನ್ನು ದೇವಿ, ಶಕ್ತಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದೇವಿ ದುರ್ಗೆಯಿಂದಲೇ ಸಂಸಾರದ ರಚನೆಯಾಗಿದೆಯಂತೆ. ಆದಿಶಕ್ತಿಯ ಆರಾಧನೆ ತಿಳಿದಿದ್ದರೆ ಸುಖ-ಸಮೃದ್ಧ ಜೀವನವನ್ನು ಸುಲಭವಾಗಿ ನಡೆಸಬಹುದು.
ಸ್ವಚ್ಛ ಮನಸ್ಸಿನಿಂದ ವಿಧಿ ಪ್ರಕಾರ ತಾಯಿ ದುರ್ಗೆ ಪೂಜೆ ಮಾಡಬೇಕು. ಆಗ ಮಾತ್ರ ಮನೋಕಾಮನೆ ಪೂರ್ಣಗೊಳ್ಳುತ್ತದೆ.
ತಾಯಿ ದುರ್ಗೆ ಪೂಜೆ ವಿಧಾನ ಸ್ವಲ್ಪ ಕಠಿಣ. ಆದ್ರೆ ಶುದ್ಧ ಮನಸ್ಸಿನಿಂದ ಆರಾಧನೆ ಮಾಡಿದ್ರೆ ದುರ್ಗೆ ಬೇಗ ಭಕ್ತರಿಗೆ ಕರುಣೆ ತೋರ್ತಾಳೆಂದು ನಂಬಲಾಗಿದೆ.
ಭೂಮಿ ಇರಲಿ ಇಲ್ಲ ಬೇರೆ ಯಾವುದೇ ಲೋಕವಿರಲಿ ಪಾಪಿಗಳು ದುರ್ಗೆಯ ಶಕ್ತಿಗೆ ಹೆದರುತ್ತಾರೆ. ಹಾಗಾಗಿ ಶತ್ರು ನಾಶಕ್ಕೆ ದುರ್ಗೆ ನಾಮವನ್ನು ಜಪಿಸಬೇಕೆಂದು ಧರ್ಮ ಗ್ರಂಥದಲ್ಲಿ ಹೇಳಲಾಗಿದೆ.
ಯಾವುದೇ ಸಂಕಷ್ಟ ಎದುರಾಗಿದ್ದಾಗ ತಾಯಿ ದುರ್ಗೆಯ ಯಾವುದೇ ಮಂತ್ರವನ್ನು ಜಪಿಸಿ. ಪ್ರತಿ ದಿನ ಬೆಳಿಗ್ಗೆ 108 ಬಾರಿ ದುರ್ಗೆ ಮಂತ್ರವನ್ನು ಜಪಿಸಬೇಕು.
ಮಾತೆ ದುರ್ಗೆ ಜಪ ಮಾಡುವಾಗ ಕೆಂಪು ದಾಸವಾಳದ ಹೂವನ್ನು ಅರ್ಪಿಸಿ. ದಾಸವಾಳದ ಹೂ ಅರ್ಪಣೆ ಮಾಡುವುದ್ರಿಂದ ದೇವಿ ಪ್ರಸನ್ನಳಾಗ್ತಾಳೆ. ದಾಸವಾಳದ ಹೂ ಅರ್ಪಣೆ ಮಾಡಿದ್ರೆ ಜೀವನದ ದುಃಖವೆಲ್ಲ ದೂರವಾಗುತ್ತದೆ ಎಂದು ನಂಬಲಾಗಿದೆ.
ಬಡ ಹೆಣ್ಣು ಮಕ್ಕಳನ್ನು ಖುಷಿಪಡಿಸಿ. ಬಟ್ಟೆ, ಭೋಜನವನ್ನು ದಾನ ಮಾಡಿ. ಹೀಗೆ ಮಾಡಿದ್ರೆ ದೇವಿ ಪ್ರಸನ್ನಳಾಗ್ತಾಳೆ.