ಮಂಗಳೂರು: ಪಾನ್ ಮಸಾಲ, ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಮದು ಗೊತ್ತಿದ್ದರೂ ಅಗೆಯುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಇದು ಅನಾರೋಗ್ಯಕ್ಕೂ ಕಾರಣ ಜೇಬಿನಲ್ಲಿದ್ದ ಹಣ ಖಾಲಿಯಾಗಲು ಕಾರಣವಾಗುತ್ತದೆ ಎಂಬ ಅಂಶವನ್ನು ಖುದ್ದಾಗಿ ಇಬ್ಬರು ಚಾಲಕರು ಮನಗಂಡಿದ್ದಾರೆ.
ಹೌದು ಗುಟ್ಕಾ ಅಗೆಯುತ್ತಿದ್ದ ಕಾರಣ ಇಬ್ಬರು ಚಾಲಕರು ಆರ್ ಟಿಒ ಅಧಿಕಾರಿಗಳಿಗೆ ದಂಡ ತೆತ್ತಿದ್ದಾರೆ. ಕೇವಲ 50, 100 ರೂ. ಅಲ್ಲ. ಬರೋಬ್ಬರಿ 5 ಸಾವಿರ ದಂಡ ಹಾಕಿದ್ದಾರೆ. ಈ ಘಟನೆ ಮಂಗಳೂರಿನ ಬಿಜೈ ಎಂಬಲ್ಲಿ ನಡೆದಿದೆ. ಇಬ್ಬರು ಚಾಲಕರು ಗುಟ್ಕಾ ಅಗೆಯುತ್ತಾ ಆರ್ ಟಿ ಒ ಅಧಿಕಾರಿಗಳ ಮುಂದೆ ಬಂದಿದ್ದಾರೆ.
ಚಾಲನೆ ವೇಳೆ ಗುಟ್ಕಾ ಅಗೆಯುವುದು, ಮದ್ಯ ಸೇವನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಹಾಗಾಗಿ ಚಾಲನೆ ಸಂದರ್ಭದಲ್ಲಿ ಗುಟ್ಕಾ ಅಗೆಯುವವರ ಮೇಲೆ ದಂಡ ವಿಧಿಸಬಹುದು, ಶಿಕ್ಷೆ ನೀಡಬಹುದು ಎಂದು ಆರ್ ಟಿ ಒ ಅಧಿಕಾರಿ ಆರ್.ಎಂ. ವರ್ಣೇಕರ್ ಹೇಳಿದ್ದಾರೆ.