ರಾಜ್ಯದ ರೈತರಿಗೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಜಾನುವಾರುಗಳಿಗೆ ಮನೆಬಾಗಿಲಲ್ಲೇ ಚಿಕಿತ್ಸೆ ನೀಡಲು ಪಶು ಅಂಬುಲೆನ್ಸ್ ಸೇವೆ ಆರಂಭಿಸಲಾಗುತ್ತಿದ್ದು, ಮೇ 7 ರಂದು ಇದಕ್ಕೆ ಚಾಲನೆ ದೊರೆಯಲಿದೆ.
ಶುಕ್ರವಾರದಂದು ವಿಕಾಸಸೌಧದಲ್ಲಿ ಸಂಚಾರಿ ಪಶು ಅಂಬುಲೆನ್ಸ್ ಅನ್ನು ಪರೀಕ್ಷಿಸಿದ ಬಳಿಕ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಈ ಮಾಹಿತಿ ನೀಡಿದ್ದು, ಮೇ 7ರಂದು ಕೇಂದ್ರ ಪಶುಸಂಗೋಪನಾ ಸಚಿವ ಪುರುಷೋತ್ತಮ ರೂಪಾಲ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಆಂಬುಲೆನ್ಸ್ ಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ ಎಂದು ತಿಳಿಸಿದರು.
ಒಟ್ಟು 275 ಪಶು ಅಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು ಈ ಪೈಕಿ ಮೇ 7ರಂದು 70 ಅಂಬುಲೆನ್ಸ್ ಗಳನ್ನು ಜಾನುವಾರಗಳ ಸೇವೆಗೆ ಲೋಕಾರ್ಪಣೆ ಮಾಡುತ್ತಿರುವುದಾಗಿ ತಿಳಿಸಿದ ಅವರು, ಇದರಿಂದ ಜಾನುವಾರುಗಳನ್ನು ಸಾಕುತ್ತಿರುವ ರೈತರಿಗೆ ಅನುಕೂಲವಾಗಲಿದೆ ಎಂದರು.