alex Certify ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿನ ಮರದಲ್ಲಿ ಅಡಗಿರುವ ಪಕ್ಷಿಗಳನ್ನು ಗುರುತಿಸಬಲ್ಲಿರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಪ್ಟಿಕಲ್ ಭ್ರಮೆ ಚಿತ್ರದಲ್ಲಿನ ಮರದಲ್ಲಿ ಅಡಗಿರುವ ಪಕ್ಷಿಗಳನ್ನು ಗುರುತಿಸಬಲ್ಲಿರಾ..?

This Optical Illusion Challenges You To Find 5 Hidden Animals On A Treeಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ ರೀತಿ. ಹಾಗಂತ ಈ ಸಮಸ್ಯೆಗಳಿಗೆ ಇಂಟರ್ನೆಟ್ ಯಾವಾಗಲೂ ಪರಿಹಾರವನ್ನು ಸಹ ಹೊಂದಿರುತ್ತದೆ. ಇದೀಗ ಯಾವ ಆಪ್ಟಿಕಲ್ ಚಿತ್ರ ವೈರಲ್ ಆಗಿದೆ, ಅದರಲ್ಲೇನಿದೆ ಬನ್ನಿ ನೋಡೋಣ.

ಚಿತ್ರವು ಮೊದಲ ನೋಟದಲ್ಲಿ ಸರಳ ಮರದಂತೆ ಕಾಣುತ್ತದೆ. ಆದರೆ, ಮರದಲ್ಲಿ ಒಂದಲ್ಲ ಎರಡಲ್ಲ ಐದು ಪಕ್ಷಿಗಳಿವೆ. ಅವುಗಳನ್ನು ಗುರುತಿಸುವುದು ನಿಮಗೆ ಬಿಟ್ಟಿದ್ದು. ನೀವು ನಿಮ್ಮ ಸಮಯವನ್ನು ತೆಗೆದುಕೊಳ್ಳಬಹುದು ಮತ್ತು ಅವುಗಳನ್ನು ನೀವೇ ಕಂಡುಕೊಳ್ಳಬಹುದು. ಈ ಚಿತ್ರದಲ್ಲಿ ಏನನ್ನು ಮರೆಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಿರಿ.

ಒಂದು ವೇಳೆ ನಿಮಗೆ ಗೊತ್ತಾಗದಿದ್ದರೆ ಉತ್ತರ ಇಲ್ಲಿದೆ. ಹುಂಜ, ಕೋಳಿ ಮತ್ತು ಮೂರು ಮರಿಗಳು ಈ ಚಿತ್ರದಲ್ಲಿ ಅಡಗಿವೆ. ಮರದ ಓರೆಯಾದ ಕೊಂಬೆಗಳ ನಡುವೆ ಅವು ತುಂಬಾ ಜಾಣತನದಿಂದ ಮರೆಮಾಚಲ್ಪಟ್ಟಿವೆ. ಅವುಗಳನ್ನು ಗುರುತಿಸುವುದು ಸ್ವಲ್ಪ ಕಷ್ಟವಾಗಬಹುದು ಅಷ್ಟೇ.

ಹಾಗೆಯೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬೇಸ್‌ಬಾಲ್ ಅಭಿಮಾನಿಗಳಿಗೊಂದು ಮೆದುಳಿನಲ್ಲಿ ಹುಳ ಬಿಡಲಾಗಿದೆ. ಚಿತ್ರದಲ್ಲಿರುವ ಬ್ಯಾಟರ್ ನ ಬ್ಯಾಟಿಂಗ್ ಬಲಗೈ ಅಥವಾ ಎಡಗೈನಾ ಅನ್ನೋದು ಸವಾಲು ಹಾಕಲಾಗಿದೆ. ಇದನ್ನು ನೋಡಿದ  ಸಾಮಾಜಿಕ ಮಾಧ್ಯಮ ಬಳಕೆದಾರರಂತೂ ಫುಲ್ ಕನ್ಫ್ಯೂಸ್ ಆಗಿದ್ದಾರೆ.

 

 

 

 

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...