alex Certify ಇಲಿರಾಯನ ದರ್ಬಾರ್ ತಡೆಯಲು ಇಲ್ಲಿದೆ ಸರಳ ಉಪಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲಿರಾಯನ ದರ್ಬಾರ್ ತಡೆಯಲು ಇಲ್ಲಿದೆ ಸರಳ ಉಪಾಯ

ನಿಮ್ಮ ಮನೆಯಲ್ಲಿ ಇಲಿಯ ಕಾಟ ಹೆಚ್ಚಾಗಿದ್ದರೆ ಕೆಲವು ಸರಳ ವಿಧಾನದಿಂದ ಇಲಿಗಳನ್ನು ಓಡಿಸಬಹುದು. ಅಂತಹ ಕೆಲವು ಉಪಾಯಗಳು ಇಲ್ಲಿವೆ.

ಈರುಳ್ಳಿ:  ಈರುಳ್ಳಿಯ ವಾಸನೆಯನ್ನು ಇಲಿ ಸಹಿಸುವುದಿಲ್ಲ. ಹಾಗಾಗಿ ಇಲಿ ಬರುವ ಕಡೆ ಈರುಳ್ಳಿಯನ್ನು ಗೋಲವಾಗಿ ಕತ್ತರಿಸಿ ಇಡಿ.

ಹತ್ತಿ: ಹತ್ತಿಯನ್ನು ಉಂಡೆಯನ್ನಾಗಿ ಮಾಡಿ ಅದನ್ನು ಪುದೀನಾ ಎಣ್ಣೆಯಲ್ಲಿ ಅದ್ದಿ ಇಲಿ ಬರುವ ಜಾಗದಲ್ಲಿ ಇಡಿ.

ಫಿನೈಲ್ ಗುಳಿಗೆ: ಫಿನೈಲ್ ಗುಳಿಗೆಗಳ ವಾಸನೆಗೆ ಇಲಿಗಳು ಹತ್ತಿರ ಸುಳಿಯುವುದಿಲ್ಲ.

ಡಿಟರ್ಜೆಂಟ್: ಎರಡು ಚಮಚ ಡಿಟರ್ಜೆಂಟ್ ಮತ್ತು ಎರಡು ಕಪ್ ಅಮೋನಿಯಾವನ್ನು ನೀರಿನೊಂದಿಗೆ ಸೇರಿಸಿ ಇಲಿ ಬರುವ ಜಾಗದಲ್ಲಿಡಿ.

ಮೆಣಸಿನ ಪುಡಿ: ಇಲಿ ಬರುವ ಸ್ಥಳಕ್ಕೆ ಮೆಣಸಿನ ಪೌಡರ್ ಹಾಕಿದರೆ ಅದರ ಘಾಟು ವಾಸನೆಗೆ ಇಲಿ ಬರುವುದಿಲ್ಲ.

ಮಸಾಲೆ ಎಲೆ: ಇಲಿ ಬರುವ ಜಾಗದಲ್ಲಿ ಮಸಾಲೆ ಎಲೆಗಳನ್ನಿಡಿ. ಈ ಎಲೆಗಳನ್ನು ಅವು ಆಹಾರವೆಂದು ಭಾವಿಸಿ ತಿನ್ನುತ್ತವೆ. ಇದು ಇಲಿಗಳ ಆರೋಗ್ಯಕ್ಕೆ ಹಾನಿಕಾರಕ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...