ಪಂಜಾಬ್ ನ ಮಾದಕ ದ್ರವ್ಯ ನಿರೋಧಕ ವಿಭಾಗದ ಪೊಲೀಸರು ಓರ್ವ ಕಾಲೇಜು ವಿದ್ಯಾರ್ಥಿನಿ ಮತ್ತು ಆಕೆಯ ಇಬ್ಬರು ಸಹಚರರಿಂದ 6 ಕೆಜಿಯಷ್ಟು ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 30 ಕೋಟಿ ರೂಪಾಯಿಗೂ ಅಧಿಕವಾಗಿದೆ.
ಗುರುವಾರ ಈ ಮೂವರು ಎಸ್ ಯು ವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಮೃತ್ ಸರದ ವಲ್ಹಾ ಬೈಪಾಸ್ ಬಳಿ ಅಡ್ಡಗಟ್ಟಿದ ಪೊಲೀಸರು ತಪಾಸಣೆ ನಡೆಸಿದಾಗ ಅವರ ಬಳಿ 6 ಕೆಜಿ ಹೆರಾಯಿನ್ ಇರುವುದು ಪತ್ತೆಯಾಗಿದೆ.
ಕಚೇರಿಯಲ್ಲಿ ಉತ್ಸಾಹದಿಂದಿರಲು ಬೆಳಿಗ್ಗೆ ಹೀಗಿರಲಿ ನಿಮ್ಮ ದಿನಚರಿ
ಕಾಲೇಜು ವಿದ್ಯಾರ್ಥಿನಿಯನ್ನು ಲವ್ ಪ್ರೀತ್ ಕೌರ್ ಎಂದು ಗುರುತಿಸಲಾಗಿದ್ದು, ಈಕೆ ಪಂಜಾಬಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ.
ಅವರ ಸಹಪಾಠಿಗಳಾದ ದೀಪ್ ರಾಯ್ ಮತ್ತು ಮೇಹಕ್ ರಾಯ್ ಇಬ್ಬರೂ ಭಾರತ-ಪಾಕಿಸ್ತಾನ ಗಡಿಗೆ ಅತ್ಯಂತ ಸನಿಹದಲ್ಲಿರುವ ಮಹಾವ ಗ್ರಾಮದ ನಿವಾಸಿಗಳಾಗಿದ್ದಾರೆ.
ಈ ಮೂವರನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.