2015 ರ ಆಗಸ್ಟ್ 18 ರಂದು ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನ ಅಪಘಾತದಿಂದ ಕೂದಲೆಳೆ ಅಂತರದಿಂದ ಪಾರಾಗಿದ್ದರ ಪ್ರೇರಣೆಯಿಂದ ನಿರ್ಮಾಣವಾಗಿರುವ ಅಜಯ್ ದೇವಗನ್ ಮತ್ತು ಅಮಿತಾಭ್ ಬಚ್ಚನ್ ನಟಿಸಿರುವ ರನ್ ವೇ 34 ಅನ್ನು ವೀಕ್ಷಿಸಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ `ಮಜಾ ಆ ಗಯಾ’ ಎಂದು ಉದ್ಘರಿಸಿ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ತೆರೆ ಕಂಡಿರುವ ಈ ಚಿತ್ರವನ್ನು ದೇವಗನ್ ನಿರ್ಮಾಣ ಮತ್ತು ನಿರ್ದೇಶನ ಮಾಡಿದ್ದಾರೆ. ದೋಹಾದಿಂದ ಕೊಚ್ಚಿಗೆ ತೆರಳುತ್ತಿದ್ದ 9ಡಬ್ಲ್ಯೂ 555 ಜೆಟ್ ಏರ್ ವೇಸ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕೂದಲೆಳೆ ಅಂತರದಿಂದ ಬಹುದೊಡ್ಡ ಅಪಘಾತದಿಂದ ಪಾರಾಗಿತ್ತು. ಈ ನೈಜ ಘಟನೆಯ ಕಥಾ ಹಂದರವನ್ನು ಇಟ್ಟುಕೊಂಡು ಅಜಯ್ ದೇವಗನ್ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ದೇವಗನ್ ಕ್ಯಾಪ್ಟನ್ ವಿಕ್ರಾಂತ್ ಖನ್ನಾ ಅವರ ಪಾತ್ರವನ್ನು ನಿಭಾಯಿಸಿದ್ದಾರೆ.
ಹಿಂದಿ ರಾಷ್ಟ್ರಭಾಷೆ ಎಂದು ಸರ್ಕಾರ ಎಲ್ಲಿಯೂ ಹೇಳಿಲ್ಲ; ಕೇಂದ್ರ ಸಚಿವರ ಸ್ಪಷ್ಟನೆ
ಚಿತ್ರ ವೀಕ್ಷಿಸಿದ ನಂತರ ಟ್ವೀಟ್ ಮಾಡಿರುವ ಅಕ್ಷಯ್ ಕುಮಾರ್, ರನ್ ವೇ 34 ಚಿತ್ರ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾನು ಚಿತ್ರ ನೋಡಿದೆ. ಸಹೋದರ ಅಜಯ್ ದೇವಗನ್, ಸತ್ಯವಾಗಿ ಮಜಾ ಬಂದಿದೆ. ಚಿತ್ರದಲ್ಲಿ ನೀವು ತೋರಿಸಿರುವ ಥ್ರಿಲ್ಲರ್ ರೋಮಾಂಚಕಾರಿಯಾಗಿದೆ. ಸೂಪರ್ಬ್ ವಿಎಫ್ಎಕ್ಸ್, ಅತ್ಯದ್ಭುತವಾದ ನಟನೆ ಮತ್ತು ನಿರ್ದೇಶನ ನೀಡಿದ್ದೀರಿ. ಅಮಿತಾಭ್ ಬಚ್ಚನ್ ಸರ್ ಅರ್ಥಪೂರ್ಣವಾಗಿ ನಟಿಸಿದ್ದಾರೆ. ನಿಮ್ಮ ಇಡೀ ತಂಡಕ್ಕೆ ಶುಭಾಶಯಗಳನ್ನು ಕೋರುತ್ತೇನೆ ಎಂದಿದ್ದಾರೆ.