ಮೈದಾ – 1 ಕಪ್, ಬೆಣ್ಣೆ – 1/2 ಕಪ್, ಸಕ್ಕರೆಪುಡಿ – 1/3 ಕಪ್, ಉಪ್ಪು – 1/4 ಟೀ ಸ್ಪೂನ್, ಬೇಕಿಂಗ್ ಪೌಡರ್ – 1/4 ಟೀ ಸ್ಪೂನ್, ಜೀರಿಗೆ – 1 ½ ಟೀ ಸ್ಪೂನ್ (ಹುರಿದು ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿಕೊಂಡಿದ್ದು.)
ಮಾಡುವ ವಿಧಾನ:
ಒಂದು ಬೌಲ್ ಗೆ ಬೆಣ್ಣೆ ಹಾಗೂ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇದು ಕ್ರೀಂ ನ ಹದಕ್ಕೆ ಇರಲಿ. ಇನ್ನೊಂದು ಬೌಲ್ ನಲ್ಲಿ ಮೈದಾ, ಬೇಕಿಂಗ್ ಪೌಡರ್ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಬೆಣ್ಣೆಯ ಮಿಶ್ರಣಕ್ಕೆ ಸ್ವಲ್ಪ ಸ್ವಲ್ಪವೇ ಹಿಟ್ಟು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ. ಇದು ಮುದ್ದೆ ರೀತಿ ಆಗುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಜೀರಿಗೆ ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿಕೊಳ್ಳಿ.
ಈ ಹಿಟ್ಟಿನ ಮಿಶ್ರಣವನ್ನು ಚಪಾತಿ ಹಿಟ್ಟಿನಂತೆ ಸ್ವಲ್ಪ ನಾದಿಕೊಂಡು ನಂತರ ಲಟ್ಟಿಸಿಕೊಳ್ಳಿ. ತುಂಬ ತೆಳುವಾಗಿ ಲಟ್ಟಿಸಿಕೊಳ್ಳಬೇಡಿ. ಕುಕ್ಕಿಸ್ ಕಟ್ಟರ್ ಅಥವಾ ಒಂದು ಬೌಲ್ ನ ಸಹಾಯದಿಂದ ವೃತ್ತಾಕಾರದಲ್ಲಿ ಕತ್ತರಿಸಿಕೊಂಡು ಬೇಕಿಂಗ್ ಟ್ರೈ ಮೇಲೆ ಹಾಕಿ. ಪ್ರಿ ಹೀಟ್ ಮಾಡಿಟ್ಟುಕೊಂಡ ಒವನ್ ನಲ್ಲಿ 20 ನಿಮಿಷಗಳ ಕಾಲ ಬೇಕ್ ಮಾಡಿಕೊಳ್ಳಿ.