ಧಾರ್ (ಮಧ್ಯಪ್ರದೇಶ): ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ಗಳನ್ನು ಪೋಸ್ಟ್ ಮಾಡಿದ ಮೂವರ ವಿರುದ್ಧ ಪೊಲೀಸರು ಗುರುವಾರ ಧಾರ್ ಜಿಲ್ಲೆಯ ತಿರ್ಲಾ ಗ್ರಾಮದಲ್ಲಿ ಪ್ರಕರಣ ದಾಖಲಿಸಿ ಬಂಧನಕ್ಕೊಳಪಡಿಸಿದ್ದಾರೆ.
ಮೂವರು ಆರೋಪಿಗಳಾದ ಅಂಕಿತ್ ಚೌಧರಿ, ಹರ್ಷ್ ಮುಕಾಟಿ ಮತ್ತು ನಾರಾಯಣ ಮುಕಾಟಿ ಇವರು ತಿರ್ಲಾ ಗ್ರಾಮದ ನಿವಾಸಿಗಳಾಗಿದ್ದು, ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿರ್ಲಾ ಪೊಲೀಸ್ ಠಾಣೆ ಪ್ರಭಾರಿ ಭಾಗಚಂದ್ರ ತನ್ವಾರ್ ತಿಳಿಸಿದ್ದಾರೆ.
ಭರ್ಜರಿ ಕಾರ್ಯಾಚರಣೆ: 100 ಕೋಟಿ ರೂ. ಮೌಲ್ಯದ ಡ್ರಗ್ಸ್, 30 ಲಕ್ಷ ನಗದು ವಶ
ಈ ಮೂವರಲ್ಲಿ ಒಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತನ್ನನ್ನು ಸಂಪರ್ಕಿಸಿ ತನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದರು ಮತ್ತು ನಂತರ ಇಬ್ಬರು ಚಾಟ್ ಮಾಡಲು ಆರಂಭಿಸಿ ಭೇಟಿಯಾಗುವಂತೆ ಒತ್ತಡ ಹೇರಿದ್ದರು. ಆಗ ಆಕೆ ತೊಂದರೆಯಾಗಬಹುದೆಂದು ಎಚ್ಚೆತ್ತು ಚಾಟ್ ಮಾಡುವುದನ್ನು ನಿಲ್ಲಿಸಿದ್ದರು. ಬಳಿಕ ಮೂವರು ಆಕೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ.
ಅವರಲ್ಲಿ ಅಂಕಿತ್ ಚೌಧರಿ ಎಂಬಾತ ಅವಳನ್ನು ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿ ಯಾವುದಾದರೂ ನಿರ್ಜನ ಸ್ಥಳದಲ್ಲಿ ಭೇಟಿಯಾಗುವಂತೆ ಕೇಳಿದ್ದ. ಒಪ್ಪಿಕೊಳ್ಳದಿದ್ದಾಗ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ್ದು, ಮತ್ತು ಫೋಟೋಗಳನ್ನು ತನ್ನ ಪತಿಗೆ ಕಳುಹಿಸುವುದಾಗಿಯೂ ಹಾಗೂ 10 ಸಾವಿರ ಹಣ ನೀಡಬೇಕೆಂಬ ಬೇಡಿಕೆ ಇಟ್ಟಿದ್ದ ಎಂದು ಮಹಿಳೆ ದೂರು ಸಲ್ಲಿಸಿದ್ದರು.