
ಒಂದು ಹೃದಯಸ್ಪರ್ಶಿ ಘಟನೆಗೆ ಮಂಗಳವಾರ ಕಾಶ್ಮೀರ ಸಾಕ್ಷಿಯಾಗಿದೆ. ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸುವ ಮೂಲಕ ಕಾಶ್ಮೀರಿ ಮುಸ್ಲಿಂರು ಮಾನವೀಯತೆ ಮೆರೆದಿದ್ದಾರೆ.
ಸೈನಿಕರು ಪ್ರಯಾಣಿಸುತ್ತಿದ್ದ ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗಿದ್ದ ಮರಕ್ಕೆ ಗುದ್ದಿದ ಪರಿಣಾಮ ವಾಹನ ನುಜ್ಜುಗುಜ್ಜಾಗಿ ಪಲ್ಟಿಯಾಗಿ ಅದರಲ್ಲಿದ್ದ ಸೈನಿಕರು ಗಾಯಗೊಂಡಿದ್ದರು. ಆದರೆ, ಈ ದುರ್ಘಟನೆ ಎಲ್ಲಿ ಸಂಭವಿಸಿದೆ ಎಂದು ತಿಳಿದುಬಂದಿಲ್ಲ.
BIG NEWS: ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರನ ಸೂಪರ್ ವೈಸರ್
ಈ ಬಗ್ಗೆ ಟ್ವೀಟ್ ಮಾಡಿರುವ ಐ ಎನ್ ಸಿ ನಾಯಕ ಸಲ್ಮಾನ್ ನಿಮಾಝಿ, “ರಸ್ತೆ ಅಪಘಾತದಲ್ಲಿ ಗಾಯಗೊಂಡ ಸೈನಿಕರನ್ನು ಕಾಶ್ಮೀರಿ ಮುಸ್ಲಿಂರು ರಕ್ಷಿಸಿದ್ದಾರೆ. ಇದು ಕಾಶ್ಮೀರಿತ್ ನ ಮಾನವೀಯತೆಯಾಗಿದೆ. ಅವರಿಗೆಲ್ಲರಿಗೂ ಅಭಿನಂದನೆ ಮತ್ತು ಗೌರವವನ್ನು ಸಲ್ಲಿಸುತ್ತೇನೆ’’ ಎಂದಿದ್ದಾರೆ.