ಇತ್ತೀಚೆಗಷ್ಟೆ ಟಾಟಾ ಸಮೂಹ ತೆಕ್ಕೆಗೆ ಸೇರಿದ್ದ ಏರ್ ಇಂಡಿಯಾ, ಶೇಕಡ 90 ಕ್ಕಿಂತ ಹೆಚ್ಚು ಸಾಧನೆ ಮಾಡಿದೆ. ಮಾರ್ಚ್ ನಲ್ಲಿ ಡಿಜಿಸಿಎ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ ಏರ್ ಇಂಡಿಯಾ ಅತ್ಯುತ್ತಮ ಸಾಧನೆ ಮಾಡಿರುವುದು ಖಚಿತವಾಗಿದೆ.
ಮಾರ್ಚ್ ತಿಂಗಳಲ್ಲಿ ಏರ್ ಇಂಡಿಯಾದ ಆನ್-ಟೈಂ ಪರ್ಫಾರ್ಮೆನ್ಸ್ (ಒಟಿಪಿ) ಶೇಕಡ 28 ಕ್ಕೆ ಏರಿಕೆಯಾಗಿದೆ.
ಮಾರ್ಚ್ ವರೆಗೆ ನಾಲ್ಕು ಮೆಟ್ರೋ ವಿಮಾನ ನಿಲ್ದಾಣಗಳಾದ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದ್ರಾಬಾದ್ ನಿಂದ ನಿರ್ಗಮನ ಮಾದರಿಗಳನ್ನು ಅವಲೋಕಿಸಿದರೆ ಏರ್ ಇಂಡಿಯಾದ ಒಟಿಪಿ ಶೇಕಡ 91.2 ರಷ್ಟಕ್ಕೆ ತಲುಪಿದೆ ಎಂದು ಡಿಜಿಸಿಎ ಅಂಕಿಅಂಶಗಳು ತಿಳಿಸಿವೆ.
ಒಲೆ ಬೇಕೆಂದಿಲ್ಲ…..! ಕಾರಿನ ಬಾನೆಟ್ ಮೇಲೆ ಸಿದ್ಧವಾಯ್ತು ಚಪಾತಿ
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಏರ್ ಇಂಡಿಯಾದ ಒಟಿಪಿ ಶೇಕಡ 75.1, ನವೆಂಬರ್ ನಲ್ಲಿ ಶೇಕಡ 67.9 ಮತ್ತು ಡಿಸೆಂಬರ್ ನಲ್ಲಿ ಶೇಕಡ 71.7 ರಷ್ಟಿತ್ತು. ಆದರೆ, ತಿಂಗಳಿಂದ ತಿಂಗಳಿಗೆ ತನ್ನ ಸಾಧನೆಯ ಪ್ರಮಾಣವನ್ನು ಉತ್ತಮಪಡಿಸಿಕೊಂಡು ಬಂದಿರುವ ಏರ್ ಇಂಡಿಯಾ ಶೇಕಡ 91.2 ಕ್ಕೆ ತಲುಪಿದೆ.