
ಒಡಿಶಾದ ಸೋನೆಪುರ್ನಲ್ಲಿ ಮಹಿಳೆಯೊಬ್ಬರು ಕಾರ್ ಬಾನೆಟ್ನಲ್ಲಿ ಚಪಾತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆ 40 ಡಿಗ್ರಿ ಶಾಖದಲ್ಲಿ ಕಾರಿನ ಬಾನೆಟ್ನಲ್ಲಿ ಚಪಾತಿ ಮಾಡುತ್ತಿರುವುದನ್ನು ತೋರಿಸುವ ವಿಡಿಯೋ ವೈರಲ್ ಆಗಿದೆ.
ಟ್ವಿಟ್ಟರ್ ಬಳಕೆದಾರ ನಿಲಮಾಧಬ್ ಪಾಂಡಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಣಿಪುರದ ಹವಾಮಾನ ಕಾರ್ಯಕರ್ತೆ ಲಿಸಿಪ್ರಿಯಾ ಕಂಗುಜಮ್, ಭಾರತಕ್ಕೆ ಅಭಿನಂದನೆಗಳು ! ಅಂತಿಮವಾಗಿ ನಾವು ಕಾರ್ ಬಾನೆಟ್ ಮೇಲೆ ರೊಟ್ಟಿ ಮಾಡಬಹುದು ಎಂದು ಟೀಕಿಸಿದ್ದಾರೆ.
ತುಂಬಾ ಬಿಸಿ ವಾತಾವರಣಕ್ಕೆ ಕಾರಣವೇನೆಂದರೆ ಮರಗಳನ್ನು ಕಡಿಯುತ್ತಿರುವುದು. ಆ ವಿಡಿಯೋದಲ್ಲಿ ಎಲ್ಲೂ ಮರಗಳೇ ಕಾಣಿಸುತ್ತಿಲ್ಲ ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ನಾವು ಎಸಿ ರಸ್ತೆಗಳನ್ನು ಮಾಡಲು ಸಾಧ್ಯವಿಲ್ಲ, ಆದರೆ ಮರಗಳನ್ನು ನೆಡಬಹುದು ಅಂತೆಲ್ಲಾ ಪ್ರತಿಕ್ರಿಯೆ ನೀಡಿದ್ದಾರೆ.