alex Certify ಬ್ಯಾಟಿಂಗ್‌ ವೈಫಲ್ಯದಿಂದ ಕಂಗೆಟ್ಟಿರುವ ಕೊಹ್ಲಿಗೆ ರವಿಶಾಸ್ತ್ರಿ ಹೇಳಿದ್ದಾರೆ ಈ ಕಿವಿಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಟಿಂಗ್‌ ವೈಫಲ್ಯದಿಂದ ಕಂಗೆಟ್ಟಿರುವ ಕೊಹ್ಲಿಗೆ ರವಿಶಾಸ್ತ್ರಿ ಹೇಳಿದ್ದಾರೆ ಈ ಕಿವಿಮಾತು

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಬ್ಯಾಟ್ಸಮನ್​ ವಿರಾಟ್​ ಕೊಹ್ಲಿ ಈ ಬಾರಿಯ ಸೀಸನ್​​ನಲ್ಲಿ ಯಾಕೋ ಫಾರ್ಮ್​ ಕಳೆದುಕೊಂಡಂತೆ ಕಾಣುತ್ತಿದೆ. ಈ ಸೀಸನ್​ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕೊಹ್ಲಿ ಕೇವಲ 128 ರನ್​ಗಳನ್ನಷ್ಟೇ ಪೇರಿಸುವಲ್ಲಿ ಶಕ್ತರಾಗಿದ್ದಾರೆ. ‌

ಲಕ್ನೋ ಸೂಪರ್​ ಜೈಂಟ್ಸ್​ ಹಾಗೂ ಸನ್​ ರೈಸರ್ಸ್​ ಹೈದರಾಬಾದ್​ ವಿರುದ್ಧದ ಪಂದ್ಯಗಳಲ್ಲಿ ಬ್ಯಾಟ್ಸ್​ಮನ್​​ ಶೂನ್ಯ ರನ್​ಗೆ ಪೆವಿಲಿಯನ್​ ಸೇರಿದ್ದರು. ಹಾಗೂ ರಾಜಸ್ಥಾನ್ ರಾಯಲ್ಸ್​ ವಿರುದ್ಧ ಕೇವಲ 9 ರನ್​ಗಳನ್ನು ಗಳಿಸಲಷ್ಟೇ ಶಕ್ತರಾದರು. ಇವೆಲ್ಲವನ್ನು ಗಮನಿಸಿರುವ ಟೀಂ ಇಂಡಿಯಾದ ಮಾಜಿ ಕೋಚ್​ ರವಿ ಶಾಸ್ತ್ರಿ, ಕೊಹ್ಲಿ ತಮ್ಮ ಮನಸ್ಸನ್ನು ರಿಫ್ರೆಶ್​ ಮಾಡಿಕೊಳ್ಳಲು ಬಿಡುವಿನ ಅಗತ್ಯವಿದೆ ಎಂದು ಪುನರುಚ್ಛರಿಸಿದ್ದಾರೆ.

ಕೊಹ್ಲಿ ವಿರಾಮವನ್ನೇ ತೆಗೆದುಕೊಳ್ಳದೇ ಕ್ರಿಕೆಟ್​ ಆಡಿದ್ದಾರೆ. ಅವರು ಎಲ್ಲಾ ಮಾದರಿಯ ತಂಡಗಳಲ್ಲಿ ನಾಯಕತ್ವ ವಹಿಸಿದ್ದರಿಂದ ಅವರಿಗೆ ಈಗ ವಿರಾಮದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ಕೊಹ್ಲಿ ಬ್ರೇಕ್ ತೆಗೆದುಕೊಳ್ಳುವುದು ಅವರ ಜಾಣ ನಡೆ ಎನಿಸಲಿದೆ. ಕೆಲವೊಮ್ಮೆ ನಾವು ಸಮತೋಲನವನ್ನು ನಮ್ಮತ್ತ ಸೆಳೆದುಕೊಳ್ಳಬೇಕು. ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಗಮನದಲ್ಲಿಟ್ಟುಕೊಂಡು ನೀವು ಐಪಿಎಲ್​ನಿಂದ ಹೊರಗುಳಿಯುವುದು ಉತ್ತಮ ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

ಕೇವಲ ವಿರಾಟ್​ ಮಾತ್ರವಲ್ಲ. ಬೇರೆ ಯಾವುದೇ ಕ್ರಿಕೆಟ್​ ಆಟಗಾರನಿಗೆ ನಾನು ಇದನ್ನೇ ಹೇಳಲು ಬಯಸುತ್ತೇನೆ. ನೀವು ಭಾರತೀಯ ತಂಡಕ್ಕಾಗಿ ಆಡಲು ಬಯಸುವವರಾದರೆ ನೀವು ನಿಮ್ಮ ಸುತ್ತ ಒಂದು ಗೆರೆಯನ್ನು ಎಳೆದುಕೊಳ್ಳಲೇಬೇಕು. ನೀವು ವಿರಾಮಗಳನ್ನು ತೆಗೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...