ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಪ್ರಸಕ್ತ ಐಪಿಎಲ್ ನಲ್ಲಿ ನಿರಂತರ ವೈಫಲ್ಯಗಳನ್ನು ಎದುರಿಸುತ್ತಿದ್ದಾರೆ. ಬ್ಯಾಟಿಂಗ್ ನಲ್ಲಿ ತಮ್ಮ ನೆಚ್ಚಿನ ಆಟಗಾರ ಕಮಾಲ್ ಮಾಡಬಹುದೆಂಬ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಆದರೂ ಕೂಡಾ ಅಭಿಮಾನಿಗಳು ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಕೈಚಳಕವನ್ನು ಮುಂದೆ ತೋರಲಿದ್ದರಾ ಎಂಬ ಆಶಾಭಾವನೆ ಹೊಂದಿದ್ದಾರೆ.
ಮಂಗಳವಾರದಂದು ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೇವಲ 9 ರನ್ ಗಳನ್ನಷ್ಟೇ ಗಳಿಸಲು ಶಕ್ತರಾದರು. ಎರಡನೇ ಇನ್ನಿಂಗ್ಸ್ ನ ಎರಡನೇ ಓವರ್ ನಲ್ಲಿಯೇ ಪ್ರಸಿದ್ದ್ ಕೃಷ್ಣ ಅವರಿಗೆ ವಿರಾಟ್ ಕೊಹ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಈ ಹಿಂದೆ ಎರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಶೂನ್ಯ ರನ್ ಗಳಿಸಿ ಔಟಾಗಿದ್ದರು.
ಇಷ್ಟಾದರೂ ಕೂಡಾ ವಿರಾಟ್ ಕೊಹ್ಲಿ ಯಶಸ್ಸು ಗಳಿಸುತ್ತಾರೆಂಬಾ ಅಚಲ ವಿಶ್ವಾಸ ಕೊಹ್ಲಿ ಅಭಿಮಾನಿಗಳಿಗಿದೆ. ಹೀಗಾಗಿಯೇ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮ ನೆಚ್ಚಿನ ಆಟಗಾರನಿಗೆ ಅಭಿಮಾನದ ಹೊಳೆ ಹರಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದಾಗ ಮಾತ್ರವಲ್ಲ ಕೊಹ್ಲಿ ಕಡಿಮೆ ಮೊತ್ತ ಗಳಿಸಿದರೂ ಅವರೊಂದಿಗೆ ನಾವಿದ್ದೇವೆ ಎಂದು ಒಬ್ಬರು ಟ್ವೀಟ್ ಮಾಡಿದ್ದರೆ, ಮತ್ತೊಬ್ಬರು ಸೂರ್ಯ ಉದಯಿಸುವಂತೆ ಕೊಹ್ಲಿ ಮತ್ತೆ ಫಾರ್ಮ್ ಗೆ ಮರಳುತ್ತಾರೆಂದು ಹೇಳಿದ್ದಾರೆ. ಅವರ ಅಭಿಮಾನಿಗಳ ಟ್ವೀಟ್ ಗಳು ಇಲ್ಲಿದೆ.
https://twitter.com/Sidnaaz__12/status/1518986791583612928?ref_src=twsrc%5Etfw%7Ctwcamp%5Etweetembed%7Ctwterm%5E1518986791583612928%7Ctwgr%5E%7Ctwcon%5Es1_&ref_url=https%3A%2F%2Fwww.firstpost.com%2Ffirstcricket%2Fsports-news%2Fipl-2022-will-stand-with-him-during-lows-twitterati-backs-virat-kohli-despite-batting-failure-against-rr-10602931.html