
ಈ ವೈರಲ್ ರೆಟ್ರೊ ಫಜಲ್ ವಾಸ್ತವವಾಗಿ ಒಂದು ವರ್ಣಚಿತ್ರವಾಗಿದೆ. ಅದರಲ್ಲಿ ಅಡಗಿರುವ ಕರಡಿಯನ್ನು ಗುರುತಿಸಲು ವೀಕ್ಷಕರಿಗೆ ಸವಾಲು ಹಾಕಲಾಗಿದೆ. ಚಿತ್ರವು ಬೇಟೆಗಾರನನ್ನು ತೋರಿಸುತ್ತದೆ. ಅವನು ಮೊಣಕಾಲುಗಳ ಮೇಲೆ ಬಾಗಿ ನಿಂತಿದ್ದು, ಕೈಯಲ್ಲಿ ಬಂದೂಕು ಹಿಡಿದಿದ್ದಾನೆ. ಹಿಮದಿಂದ ಆವೃತವಾದ ಕಾಡಿನಲ್ಲಿ ಆತ ಗುರಿಯನ್ನು ಹುಡುಕುತ್ತಿದ್ದಾನೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಕರಡಿ ಎಲ್ಲಿದೆ ಎಂಬುದು. ಈ ಚಿತ್ರದಲ್ಲಿ ನೀವು ಕರಡಿಯನ್ನು ಹುಡುಕಬೇಕಿದೆ.
ಮೊದಲಿಗೆ ನೋಡುವಾಗ ಅಲ್ಲಿ ಯಾವುದೇ ಕರಡಿ ಇಲ್ಲ ಎಂದು ನಂಬುವಂತೆ ಒಗಟು ನಿಮ್ಮನ್ನು ಮೋಸಗೊಳಿಸಬಹುದು. ಆದರೂ ಪಟ್ಟು ಬಿಡದೆ ಕರಡಿ ಎಲ್ಲಿದೆ ಎಂದು ಹುಡುಕಲು ಪ್ರಯತ್ನಿಸಿ……
ನಿಮಗಿನ್ನೂ ಕರಡಿ ಎಲ್ಲಿದೆ ಎಂದು ಗೊತ್ತಾಗದಿದ್ದರೆ, ಉತ್ತರ ಇಲ್ಲಿದೆ…… ಬೇಟೆಗಾರನ ಹಿಂದೆ ಪ್ರಾಣಿಯು ಬಂಡೆಯ ಮುಖದ ವೇಷದಲ್ಲಿದೆ ಎಂದು ಹಲವಾರು ಬಳಕೆದಾರರು ಗಮನಸೆಳೆದಿದ್ದಾರೆ. ಕರಡಿಯು ಪ್ರಜ್ಞಾಹೀನವಾಗಿದೆ ಅಥವಾ ಸತ್ತಿದೆ ಎಂದು ತೋರುತ್ತದೆ. ಏಕೆಂದರೆ ಅದು ನೆಲದ ಮೇಲೆ ತನ್ನ ತಲೆಯನ್ನು ಆಕಾಶದೆಡೆಗೆ ಮಲಗಿರುವಂತೆ ತೋರುತ್ತದೆ.