ಶಿಕ್ಷಕರೆಂದ್ರೆ ಪಾಠ ಮಾಡುವುದು ಮಾತ್ರವಲ್ಲ, ಮಕ್ಕಳ ಮುಂದಿನ ಉಜ್ವಲ ಭವಿಷ್ಯಕ್ಕೆ ಅವರು ಹಾಕಿಕೊಡುವ ಹೆಜ್ಜೆ ಬುನಾದಿಯಾಗುತ್ತದೆ. ಹಾಗೆಯೇ ಶಾಲೆಯಲ್ಲಿ ಕೇವಲ ಆಟ-ಪಾಠ ಮಾತ್ರವಿರದೆ, ಸ್ವಲ್ಪ ತಮಾಷೆಯಿದ್ದರೂ ಸಿಹಿಯಾಗಿರುತ್ತದೆ. ಇದೀಗ ಇಂಥದ್ದೇ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಖಂಡಿತಾ ನೋಡಲು ಮಿಸ್ ಮಾಡ್ಕೋಬೇಡಿ. ವಿಡಿಯೋದಲ್ಲಿ ಬಾಲಕ ಮತ್ತು ಅವನ ಶಾಲೆಯ ಪ್ರಾಂಶುಪಾಲರು ಒಟ್ಟಿಗೆ ತಮಾಷೆ ಮಾಡಿದ್ದಾರೆ. ಶಾಲೆಯ ಶಿಕ್ಷಕರನ್ನು ಹೆದರಿಸಲು ಪ್ರಿನ್ಸಿಪಾಲ್ ಹಾಗೂ ಬಾಲಕ ಹೊಂಚು ಹಾಕಿ ನಿಂತಿರುವ ಸುಂದರ ದೃಶ್ಯವಿದು.
ಇನ್ಸ್ಟಾಗ್ರಾಮ್ ನ ಮ್ಯಾಜಿಕಲಿ ನ್ಯೂಸ್ ಪುಟದಿಂದ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು 20 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಬಾಲಕನನ್ನು ಶಾಲೆಗೆ ಬಿಡಲು ಬಂದಿದ್ದ ಆತನ ತಾಯಿ ಈ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.
ಶಿಕ್ಷಕರೊಬ್ಬರನ್ನು ಹೆದರಿಸಲು ಬಾಲಕನೊಂದಿಗೆ ಶಾಲ ಪ್ರಾಂಶುಪಾಲರು ಕೂಡ ಸೇರಿಕೊಂಡಿದ್ದಾರೆ. ಬಾಲಕ ತನ್ನ ಪ್ರಾಂಶುಪಾಲರ ಹಿಂದೆ ಅಡಗಿಕೊಂಡಿದ್ದಾನೆ. ತನ್ನ ಶಿಕ್ಷಕ ಸಮೀಪಿಸುತ್ತಿರುವುದನ್ನು ಕಂಡು ಅವನು ಒಮ್ಮೆಲೆ ಹಿಂದಿನಿಂದ ಜಿಗಿದ್ದಾನೆ. ಒಮ್ಮೆಲೆ ಇದು ಸಂಭವಿಸಿದ್ದರಿಂದ ಶಿಕ್ಷಕರು ಭಯಭೀತರಾಗಿದ್ದಾರೆ. ಈ ಮೂಲಕ ಪ್ರಿನ್ಸಿಪಾಲ್ ಹಾಗೂ ಬಾಲಕ ಸೇರಿ ಶಿಕ್ಷಕರನ್ನು ಹೆದರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಟರ್ನೆಟ್ ಈ ಶಿಕ್ಷಕ-ವಿದ್ಯಾರ್ಥಿ ನಡುವಿನ ಸೌಹಾರ್ದತೆಯನ್ನು ಇಷ್ಟಪಟ್ಟಿದೆ.