ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬಂಗಾಳ ತಂಡದ ಮುಖ್ಯ ತರಬೇತುದಾರ 66 ವರ್ಷದ ಅರುಣ್ ಲಾಲ್, ತಮಗಿಂತ 28 ವರ್ಷ ಕಿರಿಯರಾದ 38 ರ ಹರೆಯದ ಬುಲ್ಬುಲ್ ಸಹಾ ಅವರೊಂದಿಗೆ ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ.
ತಮ್ಮ ಮೊದಲ ಪತ್ನಿ ರೀನಾ ಅವರಿಂದ ಕೆಲವು ವರ್ಷಗಳ ಹಿಂದೆ ಅರುಣ್ ಲಾಲ್ ವಿಚ್ಛೇದನ ಪಡೆದುಕೊಂಡಿದ್ದು, ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಬುಲ್ಬುಲ್ ಸಹಾ ಅವರೊಂದಿಗೆ ಪರಸ್ಪರ ಒಪ್ಪಿಗೆಯ ಸಂಬಂಧದಲ್ಲಿದ್ದರು.
ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಮೇ 2ರಂದು ವೈವಾಹಿಕ ಬದುಕಿಗೆ ಕಾಲಿಡಲಿದೆ. ಮತ್ತೊಂದು ಮಹತ್ವದ ಸಂಗತಿಯೆಂದರೆ ಅರುಣ್ ಲಾಲ್ ಅವರ ಮಾಜಿ ಪತ್ನಿ ರೀನಾ ಈಗ ಅನಾರೋಗ್ಯಕ್ಕೊಳಗಾಗಿದ್ದು, ಅವರನ್ನು ಸಹ ಮನೆಗೆ ಕರೆದುಕೊಂಡು ಬಂದು ಮದನ್ ಲಾಲ್ ನೋಡಿಕೊಳ್ಳುತ್ತಿದ್ದಾರೆ. ರೀನಾ ಅವರನ್ನು ನೋಡಿಕೊಳ್ಳಲು ಬುಲ್ಬುಲ್ ಸಹಾ ಕೂಡ ಒಪ್ಪಿಗೆ ಸೂಚಿಸಿದ್ದು, ಹೀಗಾಗಿ ಮದನ್ ಲಾಲ್ ಅವರ ಮಾಜಿ ಪತ್ನಿಗೆ ಆಸರೆ ಸಿಕ್ಕಂತಾಗಿದೆ.