ಏನೇ ಆದ್ರೂ ನಮ್ಮ ಜೊತೆಗೂಡುವವರು, ನಮ್ಮೊಂದಿಗೆ ಕಷ್ಟ-ಸುಖ ಎರಡನ್ನೂ ಹಂಚಿಕೊಳ್ಳುವವರೇ ನಿಜವಾದ ಸ್ನೇಹಿತರು. ಇಂಥ ಪರಿಪೂರ್ಣ ಸ್ನೇಹಿತರ ಹೃದಯಸ್ಪರ್ಶಿ ವಿಡಿಯೋವೊಂದು ಇದೀಗ ವೈರಲ್ ಆಗಿದೆ.
ಕ್ಯಾನ್ಸರ್ನೊಂದಿಗೆ ಹೋರಾಡುತ್ತಿದ್ದ ತಮ್ಮ ಗೆಳೆಯನಿಗೆ ಸ್ನೇಹಿತರ ಗುಂಪು ಅತ್ಯಂತ ಹೃದಯಸ್ಪರ್ಶಿ ಕೆಲಸ ಮಾಡಿದೆ. ಕ್ಯಾನ್ಸರ್ ಚಿಕಿತ್ಸೆಯನ್ನು ಪ್ರಾರಂಭಿಸಿದ ಸ್ನೇಹಿತನನ್ನು ಬೆಂಬಲಿಸಲು ಸ್ನೇಹಿತರ ಗುಂಪು ತಲೆ ಬೋಳಿಸಿ, ಗೆಳೆಯನಿಗೆ ಬೆಂಬಲವಾಗಿ ನಿಂತಿದ್ದಾರೆ. ಈ ವಿಡಿಯೋವನ್ನು ಗುಡ್ನ್ಯೂಸ್ ಮೂವ್ಮೆಂಟ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿದೆ. ಒಂದು ಗಂಟೆಯೊಳಗೆ ಅದು 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಗೆಳೆಯರ ಗುಂಪು ತಮ್ಮ ಸ್ನೇಹಿತನನ್ನು ಅಚ್ಚರಿಗೊಳಿಸಿದೆ. ಇದು ಕ್ಯಾನ್ಸರ್ ನೊಂದಿಗೆ ಹೋರಾಡುತ್ತಿರುವ ಗೆಳೆಯನಿಗೆ ಕಣ್ಣೀರು ತರಿಸಿದೆ.
ಗೆಳೆಯರು ತಮ್ಮ ತಲೆಬೋಳಿಸುವ ಪ್ರಕ್ರಿಯೆಯನ್ನು ವಿಡಿಯೋ ಮಾಡಿದ್ದಾರೆ. ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ಕ್ಯಾನ್ಸರ್ ಚಿಕಿತ್ಸೆಗಳನ್ನು ಪ್ರಾರಂಭಿಸಿದ ತಮ್ಮ ಗೆಳೆಯನೊಂದಿಗೆ ಒಗ್ಗಟ್ಟಿನಿಂದ ಸ್ನೇಹಿತರ ಗುಂಪು ತಮ್ಮ ತಲೆ ಬೋಳಿಸಿಕೊಂಡಿದ್ದಾರೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ಸ್ನೇಹಿತರ ಈ ಅದ್ಭುತ ಕೆಲಸಕ್ಕೆ ಇಂಟರ್ನೆಟ್ ಶ್ಲಾಘನೆ ವ್ಯಕ್ತಪಡಿಸಿದೆ. ಇದೆ ಅಲ್ಲವೆ ನಿಜವಾದ ಸ್ನೇಹ ಅಂದ್ರೆ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ವಿಭಾಗವನ್ನು ಪ್ರೀತಿ ಹಾಗೂ ಹೃದಯದ ಎಮೋಜಿಯಿಂದ ತುಂಬಿದ್ದಾರೆ.
https://www.instagram.com/reel/CcwhUXGl5m2/?utm_source=ig_embed&ig_rid=6c26abb8-95ea-41cd-9a03-0230e9cd950d