ದೋಸೆ ಮಾರಾಟಗಾರನ ಅಸಾಧಾರಣ ಕೌಶಲ್ಯಕ್ಕೆ ಪ್ರಭಾವಿತರಾದ ಉದ್ಯಮಿ ಹರ್ಷ್ ಗೋಯೆಂಕಾ; ಅಷ್ಟಕ್ಕೂ ಅಂಥದ್ದೇನಿದೆ ಗೊತ್ತಾ..? 26-04-2022 8:18AM IST / No Comments / Posted In: India, Featured News, Live News ಉದ್ಯಮಿ ಹರ್ಷ್ ಗೋಯೆಂಕಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮ ಅನುಯಾಯಿಗಳೊಂದಿಗೆ ಆಗಾಗ್ಗೆ ಆಸಕ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಉದ್ಯಮಿ ಇಂಟ್ರೆಸ್ಟಿಂಗ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ರಸ್ತೆ ಬದಿಯ ಸ್ಟಾಲ್ನಲ್ಲಿ ವ್ಯಕ್ತಿಯೊಬ್ಬರು ದೋಸೆಗಳನ್ನು ತಯಾರಿಸುತ್ತಿರುವ ವಿಡಿಯೋವನ್ನು 64 ವರ್ಷದ ಉದ್ಯಮಿ ಟ್ವೀಟ್ ಮಾಡಿದ್ದಾರೆ. ವ್ಯಾಪಾರಿಯ ಅಸಾಧಾರಣ ಕೌಶಲ್ಯವು ಹರ್ಷ್ ಗೋಯೆಂಕಾ ಅವರನ್ನು ಪ್ರಭಾವಿತಗೊಳಿಸಿವೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ದೋಸೆ ಮಾರಾಟಗಾರನು ಮಿಂಚಿನ ವೇಗದಲ್ಲಿ ಫ್ಲಾಟ್ ಲಾಂಗ್ ಪ್ಯಾನ್ನಲ್ಲಿ ಹಲವಾರು ದೋಸೆಗಳನ್ನು ತಯಾರಿಸಿದ್ದಾನೆ. ಒಂದು ತುದಿಯಿಂದ ದೋಸೆಯನ್ನು ಮಾಡಿದ ನಂತರ ಅವನು ಅದನ್ನು ಎಸೆಯುತ್ತಾನೆ. ಗಾಡಿಯ ಪಕ್ಕದಲ್ಲಿ ನಿಂತಿರುವ ಇನ್ನೊಬ್ಬ ವ್ಯಕ್ತಿಯು ದೋಸೆಯನ್ನು ಅನಾಯಾಸವಾಗಿ ಹಿಡಿಯುತ್ತಾನೆ. ಈ ವಿಡಿಯೋ ನೋಡಲು ಬಹಳ ಆಸಕ್ತಿದಾಯಕವಾಗಿದೆ. ಅವರ ನವೀನ ತಂತ್ರವು ಕೇವಲ ಹರ್ಷ್ ಗೋಯೆಂಕಾ ಅವರನ್ನು ಮಾತ್ರ ಮೆಚ್ಚಿಸಿಲ್ಲ. ನೆಟ್ಟಿಗರು ಕೂಡ ಈ ದೋಸೆ ಮಾರಾಟಗಾರನ ಕೌಶಲ್ಯದ ಬಗ್ಗೆ ವಿಸ್ಮಯಗೊಂಡಿದ್ದಾರೆ. ಇವರನ್ನು ಯಾವುದೇ ರೋಬೋಟ್ ಕೂಡ ಪುನರಾವರ್ತಿಸಲು ಸಾಧ್ಯವಿಲ್ಲ. ದೋಸೆ ತಿನ್ನುವುದಕ್ಕಿಂತ ಹೆಚ್ಚಾಗಿ ತನ್ನ ಕಾರ್ಯದಿಂದ ಗ್ರಾಹಕರು ಅಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಜೊಮಾಟೊ ಮತ್ತು ಸ್ವಿಗ್ಗಿ ವಿಫಲಗೊಳ್ಳುತ್ತವೆ. ಗ್ರಾಹಕರು ದೋಸೆ ತಿನ್ನಲು ವ್ಯಾಪಾರಿಯ ಅಂಗಡಿಗೆ ಭೇಟಿ ನೀಡುತ್ತಾರೆ. ಯಾವುದೇ ರೀತಿಯಲ್ಲಿ ಜನರು ಅವರ ಅಂಗಡಿಯಿಂದ ಹೋಮ್ ಡೆಲಿವರಿಯನ್ನು ಇಷ್ಟಪಡುವುದಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ. You have to love what you do, to give your best… pic.twitter.com/HRU8Df9TZg — Harsh Goenka (@hvgoenka) April 24, 2022