ಫೋರ್ಬ್ಸ್ ನಿಯತಕಾಲಿಕೆಯ ಪ್ರಕಾರ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ವಾರೆನ್ ಬಫೆಟ್ ಅವರನ್ನು ಹಿಂದಿಕ್ಕಿರುವ ಅದಾನಿ ಗ್ರೂಪ್ ನ ಗೌತಮ್ ಅದಾನಿ, ಐದನೇ ಸ್ಥಾನಕ್ಕೇರಿದ್ದಾರೆ.
ಅದಾನಿಯವರ ನಿವ್ವಳ ಸಂಪತ್ತಿನಲ್ಲಿ ಏರಿಕೆಯಾಗಿದ್ದು, ಅವರ ಒಟ್ಟು ಆಸ್ತಿ ಮೌಲ್ಯ 9.48 ಲಕ್ಷ ಕೋಟಿ ರೂಪಾಯಿ, ಅಂದರೆ 123 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ. 130.2 ಮಿಲಿಯನ್ ಡಾಲರ್ ಆಸ್ತಿ ಹೊಂದಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ನಾಲ್ಕನೇ ಸ್ಥಾನದಲ್ಲಿದ್ದಾರೆ.
167.9 ಬಿಲಿಯನ್ ಡಾಲರ್ ಹೊಂದಿರುವ ಬರ್ನಾರ್ಡ್ ಅರ್ನಾಲ್ಟ್ ಮೂರನೇ ಸ್ಥಾನದಲ್ಲಿದ್ದರೆ, 170.2 ಬಿಲಿಯನ್ ಡಾಲರ್ ನೊಂದಿಗೆ ಅಮೆಜಾನ್ ನ ಜೆಫ್
ಬಿಜೋಸ್ ಎರಡನೇ ಸ್ಥಾನದಲ್ಲಿದ್ದಾರೆ. 269.7 ಬಿಲಿಯನ್ ಡಾಲರ್ ನೊಂದಿಗೆ ಟೆಸ್ಲಾ ದ ಎಲಾನ್ ಮಸ್ಕ್ ಮೊದಲನೇ ಸ್ಥಾನದಲ್ಲಿದ್ದಾರೆ.
ಅಕ್ರಮವಾಗಿ ʼರೇಶನ್ ಕಾರ್ಡ್ʼ ಪಡೆದಿದ್ದೀರಾ…? ಹಾಗಾದ್ರೆ ಓದಲೇಬೇಕು ಈ ಸುದ್ದಿ
ಹಸಿರು ಇಂಧನ ವಲಯದಲ್ಲಿ ಗೌತಮ್ ಅದಾನಿ ತಮ್ಮ ಹೂಡಿಕೆಯನ್ನು ಹೆಚ್ಚಿಸಿಕೊಂಡಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿರುದ್ಧ ಸ್ಪರ್ಧೆ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅದಾನಿ ಕಂಪನಿ ಶೇರುಗಳು ಏರಿಕೆ ಕಂಡಿದ್ದು, ಆಸ್ತಿ ಮೌಲ್ಯ ಏರಿಕೆಯಾಗಿದೆ. ಗೌತಮ್ ಅದಾನಿ ಏಷ್ಯಾದಲ್ಲೇ ಅತಿ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.