ಪೆಟ್ರೋಲ್ ಬೆಲೆ ಗಗನಕ್ಕೇರಿರೋದ್ರಿಂದ ಬಡ ಮತ್ತು ಮಧ್ಯಮ ವರ್ಗದವರು ಸ್ವಂತ ವಾಹನ ಚಲಾಯಿಸೋದು ಕನಸಿನ ಮಾತಾಗಿಬಿಟ್ಟಿದೆ. ಅಂಥದ್ರಲ್ಲಿ ಮುಂಬೈನ ಥಾಣೆಯಲ್ಲಿ ಕೇವಲ 1 ರೂಪಾಯಿಗೆ ಲೀಟರ್ ಪೆಟ್ರೋಲ್ ಸಿಗ್ತಾ ಇದೆ. ಅಚ್ಚರಿಯಾದ್ರೂ ಇದು ಸತ್ಯ.
ಇಷ್ಟು ಅಗ್ಗದ ಬೆಲೆಗೆ ಪೆಟ್ರೋಲ್ ಸಿಗ್ತಿರೋದ್ರಿಂದ ಜನರು ಬಂಕ್ಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಅಷ್ಟಕ್ಕೂ ಇದು ಸರ್ಕಾರ ನಿಗದಿ ಮಾಡಿರೋ ಬೆಲೆಯಲ್ಲ. ಶಾಸಕರೊಬ್ಬರ ಹುಟ್ಟುಹಬ್ಬದ ಕೊಡುಗೆ.
ಬರ್ತಡೇ ಸಂಭ್ರಮದಲ್ಲಿರೋ ಶಾಸಕ ಪ್ರತಾಪ್ ಸರ್ಸಾಯಕ್, ಥಾಣೆಯ ನಿವಾಸಿಗಳಿಗೆ ಕೇವಲ 1 ರೂಪಾಯಿಗೆ ಪೆಟ್ರೋಲ್ ವಿತರಿಸುತ್ತಿದ್ದಾರೆ. ಥಾಣೆಯಲ್ಲಿರೋ ಕೈಲಾಶ್ ಪೆಟ್ರೋಲ್ ಪಂಪ್ನಲ್ಲಿ ಈ ಆಫರ್ ಲಭ್ಯವಿದೆ.
ಈಗಾಗ್ಲೇ ಸಾವಿರಕ್ಕೂ ಹೆಚ್ಚು ವಾಹನ ಸವಾರರು ಲೀಟರ್ಗೆ ಕೇವಲ 1 ರೂಪಾಯಿ ಕೊಟ್ಟು ಪೆಟ್ರೋಲ್ ಹಾಕಿಸಿಕೊಂಡಿದ್ದಾರೆ. ಈ ಪೈಕಿ ದ್ವಿಚಕ್ರ ವಾಹನ ಸವಾರರ ಸಂಖ್ಯೆಯೇ ಹೆಚ್ಚು. ಸತತ 20 ದಿನಗಳಿಂದ ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 120.51 ರೂಪಾಯಿ ಮತ್ತು ಡೀಸೆಲ್ ಲೀಟರ್ಗೆ 104.77 ರೂಪಾಯಿ ಆಗಿದೆ.
ಹಾಗಾಗಿ ಬರೀ 1 ರೂಪಾಯಿಗೆ ಪೆಟ್ರೋಲ್ ಸಿಗ್ತಿದೆ ಅನ್ನೊ ಸುದ್ದಿ ಕೇಳಿ ಜನರು ಬಂಕ್ಗೆ ದೌಡಾಯಿಸಿದ್ದಾರೆ. ಇನ್ನು ಜನರಿಗೆ ಈ ಕೊಡುಗೆ ನೀಡಿರೋ ಶಾಸಕ ಪ್ರತಾಪ್ ಸರ್ನಾಯಕ್ ಕಳೆದ ತಿಂಗಳು ಮನಿ ಲಾಂಡರಿಂಗ್ ವಿಚಾರಕ್ಕೆ ಸುದ್ದಿ ಮಾಡಿದ್ದರು. ಜಾರಿ ನಿರ್ದೇಶನಾಲಯ ಶಾಸಕರಿಗೆ ಸೇರಿದ 11.35 ಕೋಟಿ ರೂಪಾಯಿ ಆಸ್ತಿಯನ್ನು ಜಪ್ತಿ ಮಾಡಿತ್ತು.