alex Certify GST ದರ ಏರಿಕೆ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GST ದರ ಏರಿಕೆ ಆತಂಕದಲ್ಲಿದ್ದವರಿಗೆ ಇಲ್ಲಿದೆ ಗುಡ್ ನ್ಯೂಸ್

ಅರ್ಧಕ್ಕಿಂತ ಅಧಿಕ ಉತ್ಪನ್ನಗಳ ಸರಕು ಮತ್ತು ಸೇವಾ ತೆರಿಗೆಯನ್ನು ಶೇಕಡಾ 28ರ ಸ್ಲಾಬ್ ಗೆ ವರ್ಗಾಯಿಸಲಾಗುತ್ತದೆ ಅಲ್ಲದೆ 143 ಉತ್ಪನ್ನಗಳ ದರ ಏರಿಸಲಾಗುತ್ತದೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿತ್ತು.

ಆದರೆ ಇದೀಗ ಶುಭಸುದ್ದಿಯೊಂದು ಲಭ್ಯವಾಗಿದ್ದು, ಸರಕು ಮತ್ತು ಸೇವಾ ತೆರಿಗೆ ಸದ್ಯಕ್ಕೆ ಏರಿಕೆಯಾಗುವುದಿಲ್ಲ ಎಂದು ತಿಳಿದುಬಂದಿದೆ. ಅಲ್ಲದೇ ಈ ಕುರಿತು ರಾಜ್ಯಗಳಿಂದ ಜಿ.ಎಸ್.ಟಿ. ಕೌನ್ಸಿಲ್ ಯಾವುದೇ ಅಭಿಪ್ರಾಯವನ್ನು ಕೇಳಿಲ್ಲವೆಂದು ಹೇಳಲಾಗಿದೆ.

ಹೀಗಾಗಿ ಯಾವುದೇ ಉತ್ಪನ್ನಗಳ ಸರಕು ಮತ್ತು ಸೇವಾ ತೆರಿಗೆ ಸದ್ಯಕ್ಕೆ ಏರಿಕೆಯಾಗುವುದಿಲ್ಲವೆಂದು ಹೇಳಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಗಳೊಂದಿಗೆ ಸಮಾಲೋಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...