alex Certify ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಆಹಾರ ಬಡಿಸುವ ವೃದ್ಧದಂಪತಿ; ಹೃದಯಸ್ಪರ್ಶಿ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಳೆಎಲೆಯಲ್ಲಿ ಸಾಂಪ್ರದಾಯಿಕ ಆಹಾರ ಬಡಿಸುವ ವೃದ್ಧದಂಪತಿ; ಹೃದಯಸ್ಪರ್ಶಿ ವಿಡಿಯೋ ವೈರಲ್

ಉಡುಪಿ: ವೃದ್ಧ ದಂಪತಿಗಳು ತಮ್ಮ ಹೋಟೆಲ್ ನಲ್ಲಿ ಸಾಂಪ್ರದಾಯಿಕವಾಗಿ ಬಾಳೆಎಲೆಯಲ್ಲಿ ಊಟ ಬಡಿಸುತ್ತಿರುವ ವಿಡಿಯೋ ಇದೀಗ ಎಲ್ಲರ ಮನಗೆದ್ದಿದೆ.

ಗ್ರಾಹಕರು ಅವರನ್ನು ಅಜ್ಜ ಮತ್ತು ಅಜ್ಜಿ ಅಂತಾ ಪ್ರೀತಿಯಿಂದ ಕರೆಯುತ್ತಾರೆ. ಮಣಿಪಾಲದಲ್ಲಿ ಸಣ್ಣ ಉಪಹಾರ ಗೃಹವನ್ನು ವೃದ್ಧ ದಂಪತಿ ಹೊಂದಿದ್ದಾರೆ. ಅಲ್ಲಿ ಅವರು ಬಾಳೆ ಎಲೆಗಳ ಮೇಲೆ ಸಾಂಪ್ರದಾಯಿಕ ಆಹಾರವನ್ನು ಬಡಿಸುತ್ತಾರೆ.

ಅವರ ಊಟದ ವಿಡಿಯೋವನ್ನು ಮೊದಲಿಗೆ ರಕ್ಷಿತ್ ರೈ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಾಳೆ ಎಲೆಯಲ್ಲಿ ಅಜ್ಜ ಮತ್ತು ಅಜ್ಜಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಬಡಿಸುತ್ತಾರೆ. ರಸಂ, ದಾಲ್, ಫ್ರೈಸ್, ಉಪ್ಪಿನಕಾಯಿ, ಸಲಾಡ್, ಮೊಸರು ಮತ್ತು ಇತರ ಖಾದ್ಯಗಳನ್ನು ಹೊಂದಿರುವ ಊಟ ಬಡಿಸುತ್ತಾರೆ. ಇದರ ಬೆಲೆ ಕೇವಲ 50 ರೂಪಾಯಿ..!

ಈ ವೃದ್ಧ ದಂಪತಿ 1951 ರಿಂದ ಹೋಟೆಲ್ ಗಣೇಶ್ ಪ್ರಸಾದ್ ಎಂಬ ಹೋಟೆಲ್ ನಡೆಸುತ್ತಿದ್ದಾರೆ. ಆದರೆ, ಜನರು ಇದನ್ನು ‘ಅಜ್ಜ ಅಜ್ಜಿ ಮನೆ’ ಎಂದು ಕರೆಯುತ್ತಾರೆ. ಊಟ ಬಡಿಸುವ ಪ್ರತಿಯೊಬ್ಬರಿಗೂ ಅಜ್ಜ ಮತ್ತು ಅಜ್ಜಿ ತೋರುವ ಪ್ರೀತಿ ಮತ್ತು ವಾತ್ಸಲ್ಯವೇ ಅವರ ಉಪಾಹಾರ ಗೃಹದ ದೊಡ್ಡ ಆಕರ್ಷಣೆಯಾಗಿದೆ.

ವಿಡಿಯೋಗೆ ಶೀರ್ಷಿಕೆ ನೀಡಿರುವ ರಕ್ಷಿತ್, ಈ ಸ್ಥಳವು ತನಗೆ ಭಾವನಾತ್ಮಕ ಅನುಭವವನ್ನು ನೀಡಿದೆ. ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಮನೆಯೂಟ ಸವಿಯಬಹುದು. ಅದಕ್ಕಿಂತ ಹೆಚ್ಚಾಗಿ ಈ ವೃದ್ಧ ದಂಪತಿಗಳಿಂದ ನೀವು ಪಡೆಯುವ ಪ್ರೀತಿಯು ಅತೀತವಾದುದು. ಅವರು ಖಂಡಿತವಾಗಿಯೂ ನಮ್ಮಿಂದ ಹೆಚ್ಚಿನ ಪ್ರೀತಿಗೆ ಅರ್ಹರು ಎಂದು ಬರೆದಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದಾರೆ. ಅಂತಹ ಸಮಂಜಸವಾದ ಬೆಲೆಯಲ್ಲಿ ಊಟವನ್ನು ಬಡಿಸಿದ ಮತ್ತು ಅವರ ಪ್ರಯತ್ನಕ್ಕಾಗಿ ಈ ವೃದ್ಧ ದಂಪತಿಯನ್ನು ಅಂತರ್ಜಾಲದಲ್ಲಿ ನೆಟ್ಟಿಗರು ಶ್ಲಾಘಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...