ಉಕ್ರೇನ್ ಯೋಧನ ಜೀವ ರಕ್ಷಿಸಿತು ಸ್ಮಾರ್ಟ್ ಫೋನ್…..! 25-04-2022 6:02AM IST / No Comments / Posted In: Latest News, Live News, International ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವು ಮುಂದುವರೆಯುತ್ತಲೇ ಇದೆ. ಉಕ್ರೇನ್ ಯೋಧರು ಕೂಡ ಕೆಂಪು ಸೈನಿಕರಿಗೆ ದಿಟ್ಟ ಉತ್ತರವನ್ನು ನೀಡುತ್ತಿದ್ದಾಗಿ. ಇದೀಗ ಯುದ್ಧಭೂಮಿಯಲ್ಲಿದ್ದ ಉಕ್ರೇನ್ ಯೋಧನೊಬ್ಬನ ಜೀವವನ್ನು ಮೊಬೈಲ್ ಫೋನ್ ರಕ್ಷಿಸಿದೆ. ರಷ್ಯಾದ ಸೈನಿಕರು ಸಿಡಿಸಿದ ಬುಲೆಟ್ ನೇರವಾಗಿ ಉಕ್ರೇನ್ ಯೋಧನ ಮೊಬೈಲ್ ಫೋನ್ ಗೆ ಬಡಿದಿದ್ದರಿಂದ ಸೈನಿಕ ಬಚಾವಾಗಿದ್ದಾನೆ. ಮೊಬೈಲ್ ಗೆ ತಗುಲಿರುವ ಬುಲೆಟ್ ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ, ಉಕ್ರೇನ್ನ ಕಡೆಯಿಂದ ಹೋರಾಡುತ್ತಿರುವ ಸೈನಿಕನೊಬ್ಬ, 7.62 ಎಂಎಂ ಬುಲೆಟ್ ಹೊಡೆದ ನಂತರ ಸ್ಮಾರ್ಟ್ಫೋನ್ ತನ್ನ ಜೀವವನ್ನು ಹೇಗೆ ಉಳಿಸಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮೊದಲಿಗೆ ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ ಭಯಾನಕ ವಿಡಿಯೋವನ್ನು ನಂತರ ಯೂಟ್ಯೂಬ್ ಮತ್ತು ಟ್ವಿಟ್ಟರ್ನಲ್ಲೂ ಹಂಚಿಕೊಳ್ಳಲಾಗಿದೆ. ಮೊಬೈಲ್ ನ ಹಿಂಭಾಗದಲ್ಲಿ ಸಿಲುಕಿರುವ ಬುಲೆಟ್ ಅನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಇಬ್ಬರು ಸೈನಿಕರು ಉಕ್ರೇನಿಯನ್ ಭಾಷೆಯಲ್ಲಿ ಮಾತನಾಡುವುದನ್ನು ವಿಡಿಯೋದಲ್ಲಿ ಕೇಳಬಹುದು. ಅಲ್ಲಿ ಸೈನಿಕನೊಬ್ಬ ಈ ಸ್ಮಾರ್ಟ್ಫೋನ್ ತನ್ನ ಜೀವವನ್ನು ಉಳಿಸಿದೆ ಎಂದು ಹೇಳುತ್ತಾ, ತನ್ನ ಜೇಬಿನಲ್ಲಿದ್ದ ಮೊಬೈಲ್ ಅನ್ನು ಹೊರತೆಗೆದು ತೋರಿಸಿದ್ದಾನೆ. This #Ukrainian soldier is saved by his mobile phone, as he shows the bullet wedged into the rear case of the phone #UkraineRussiaWar #Ukraine #RussiaUkraineWar pic.twitter.com/mzuAhCc0GI — Globe Sentinel (@GlobeSentinels) April 18, 2022