ನವದೆಹಲಿ: ದಾಳಿಗಳ ಸಂದರ್ಭದಲ್ಲಿ ಜನರು ಸ್ವಯಂ ರಕ್ಷಣೆಗಾಗಿ ಮನೆಯಲ್ಲಿ ಬಾಟಲಿಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಯಾವುದೇ ದಾಳಿಗಳ ಸಂದರ್ಭದಲ್ಲಿ ಪೊಲೀಸರು ನಿಮ್ಮ ರಕ್ಷಣೆಗೆ ಬರುವುದಿಲ್ಲ. ಆದ್ದರಿಂದ ನಾವೇ ಸ್ವಯಂ ದಾಳಿಗಳನ್ನು ಎದುರಿಸಲು ಸಿದ್ದರಾಗಬೇಕು ಎಂದು ಹೇಳಿದ್ದಾರೆ. ಏಪ್ರಿಲ್ 16 ರಂದು ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಕೋಮು ಘರ್ಷಣೆಯ ಹಿನ್ನೆಲೆ ಸಾಕ್ಷಿ ಮಹಾರಾಜ್ ಈ ಪೋಸ್ಟ್ ಮಾಡಿದ್ದಾರೆ.
BIG NEWS: ಅಕ್ಷಯ ತೃತೀಯಕ್ಕೆ ಮುಸ್ಲಿಂ ಅಂಗಡಿಯಲ್ಲಿ ಬಂಗಾರ ಖರೀದಿಗೆ ನಿಷೇಧ; ಹಿಂದೂ ಜ್ಯುವೆಲ್ಲರಿಯಲ್ಲೇ ಖರೀದಿಸಿ; ಹೊಸ ಅಭಿಯಾನ ಆರಂಭ
ವಿವಾದಾತ್ಮಕ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುವ ಉನ್ನಾವೊ ಸಂಸದ ಫೇಸ್‌ಬುಕ್‌ನಲ್ಲಿ, ಈ ಜನಸಮೂಹವು ನಿಮ್ಮ ರಸ್ತೆ, ನೆರೆಹೊರೆ ಅಥವಾ ಮನೆಗೆ ಇದ್ದಕ್ಕಿದ್ದಂತೆ ಬಂದರೆ, ಅದಕ್ಕೆ ಪರಿಹಾರವಿದೆ. ಅಂತಹ ಅತಿಥಿಗಳಿಗೆ, ಪ್ರತಿ ಮನೆಯಲ್ಲಿ ಒಂದು ಅಥವಾ ಎರಡು ತಂಪು ಪಾನೀಯಗಳ ಪೆಟ್ಟಿಗೆಗಳು ಮತ್ತು ಕೆಲವು ಬಾಣಗಳು ಇರಬೇಕು. ಜೈ ಶ್ರೀ ರಾಮ್ ಎಂದು ಕೋಲುಗಳನ್ನು ಹಿಡಿದು ಓಡಿ ಬರುತ್ತಿರುವ ಜನರ ಗುಂಪಿನ ಫೋಟೋ ಅಪ್ ಲೋಡ್ ಮಾಡಿ ಬರದಿದ್ದಾರೆ.
“ಪೊಲೀಸರು ನಿಮ್ಮನ್ನು ರಕ್ಷಿಸಲು ಬರುವುದಿಲ್ಲ, ಬದಲಾಗಿ ತಮ್ಮನ್ನು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಾರೆ. ಈ ಜನರು ‘ಜಿಹಾದ್’ ಮಾಡಿ ಹೋದ ನಂತರ, ಪೊಲೀಸರು ಲಾಠಿ ಹಿಡಿದು ಆಗಮಿಸುತ್ತಾರೆ. ಎಲ್ಲ ಮುಗಿದ ಮೇಲೆ ತನಿಖಾ ತಂಡ ರಚಿಸುತ್ತಾರೆ ಎಂದು ಹೇಳಿದ್ದಾರೆ.