alex Certify Big News: ಜುಲೈ 1 ರಿಂದ ʼಹೊಸ ಕಾರ್ಮಿಕ ನೀತಿʼ ಜಾರಿಯಾದ್ರೆ ಕೆಲಸದ ಅವಧಿ ಸೇರಿದಂತೆ ಆಗಲಿದೆ ಈ ಎಲ್ಲ ಬದಲಾವಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಜುಲೈ 1 ರಿಂದ ʼಹೊಸ ಕಾರ್ಮಿಕ ನೀತಿʼ ಜಾರಿಯಾದ್ರೆ ಕೆಲಸದ ಅವಧಿ ಸೇರಿದಂತೆ ಆಗಲಿದೆ ಈ ಎಲ್ಲ ಬದಲಾವಣೆ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜುಲೈ 1 ರಿಂದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಹೊಸ ನಿಯಮ ಅಸ್ಥಿತ್ವಕ್ಕೆ ಬಂದರೆ ಉದ್ಯೋಗಿಗಳ ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸಂಬಂಧಗಳು, ಉದ್ಯೋಗ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು ಬದಲಾಗಲಿವೆ. ಹೊಸ ವೇತನ ಸಂಹಿತೆ ಜಾರಿಗೆ ಬಂದಲ್ಲಿ ಕೆಲಸದ ಸಮಯ, ಸಂಬಳ ಪುನರ್ರಚನೆ ಮತ್ತು ಪಿಎಫ್ ನಲ್ಲೂ ಬದಲಾವಣೆಗಳಾಗಲಿವೆ.

ಈಗಾಗ್ಲೇ ಕನಿಷ್ಠ 23 ರಾಜ್ಯಗಳು ಈ ಕಾನೂನಿನ ಕರಡು ನಿಯಮಗಳನ್ನು ಪ್ರಕಟಿಸಿವೆ. 2021ರ ಫೆಬ್ರವರಿಯಲ್ಲೇ ಕೇಂದ್ರ ಸರ್ಕಾರ ಕೂಡ ಈ ಕರಡು ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಕೇಂದ್ರ ಸರ್ಕಾರವು ನಾಲ್ಕು ಕಾರ್ಮಿಕ ನಿಯಮಗಳನ್ನು ಸೂಚಿಸಿದೆ.  ಅವುಗಳೆಂದರೆ ವೇತನ, ಕೈಗಾರಿಕಾ ಸಂಬಂಧ, ಸಾಮಾಜಿಕ ಭದ್ರತೆ ಮತ್ತು ಔದ್ಯೋಗಿಕ ಸುರಕ್ಷತೆ. ಇದಲ್ಲದೆ ಉದ್ಯೋಗಿಗಳ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕುರಿತಂತೆಯೂ ಹೊಸ ಕಾನೂನು ಸಿದ್ಧಪಡಿಸಲಾಗಿದೆ. ಕಾರ್ಮಿಕರ ಅಭ್ಯುದಯ ಏಕಕಾಲೀನ ವಿಷಯವಾಗಿರುವುದರಿಂದ, ಎಲ್ಲಾ ರಾಜ್ಯಗಳು ಒಂದೇ ಬಾರಿಗೆ ಇವುಗಳನ್ನು ಜಾರಿಗೆ ತರಬೇಕೆಂದು ಕೇಂದ್ರವು ಬಯಸಿದೆ.

ವೇತನ ಸಂಹಿತೆ ಜಾರಿಯಾದರೆ ಕಡಿಮೆಯಾಗಲಿದೆ ಕೈಗೆಟುಕುವ ಸಂಬಳ: ವೇತನದ ಸಂಹಿತೆ 2019ರ ಸರ್ಕಾರದ ಅಧಿಸೂಚನೆ ಉದ್ಯೋಗಿಯ ಟೇಕ್-ಹೋಮ್ ವೇತನವನ್ನು ಕಡಿಮೆ ಮಾಡಬಹುದು. ಆದರೆ PF ಮತ್ತು ಗ್ರಾಚ್ಯುಟಿ ಮೊತ್ತಗಳು ಹೆಚ್ಚಾಗಲಿವೆ.

ಹೊಸ ವೇತನ ಸಂಹಿತೆಯು ಉದ್ಯೋಗಿಯ ಮೂಲ ವೇತನವು ಅವನ/ಆಕೆಯ ನಿವ್ವಳ ಮಾಸಿಕ CTC ಯ ಕನಿಷ್ಠ 50 ಪ್ರತಿಶತದಷ್ಟು ಇರುತ್ತದೆ. ಆದ್ದರಿಂದ ಈ ನಿಬಂಧನೆ ಜಾರಿಗೆ ಬಂದರೆ, ಉದ್ಯೋಗಿಗಳು ಅವನ/ಅವಳ ನಿವ್ವಳ ಮಾಸಿಕ ಸಂಬಳದ 50 ಪ್ರತಿಶತಕ್ಕಿಂತ ಹೆಚ್ಚಿನದನ್ನು ಭತ್ಯೆಯ ರೂಪದಲ್ಲಿ ಪಡೆಯಲು ಸಾಧ್ಯವಾಗುವುದಿಲ್ಲ ಎಂದರ್ಥ.

ವೇತನ ಸಂಹಿತೆ ಜಾರಿಯಾದರೆ ಸಿಗಲಿದೆ ಹೆಚ್ಚಿನ ಪಿಎಫ್:  ಕೈಗೆ ಸಿಗುವ ವೇತನ ಕಡಿಮೆಯಾದ್ರೂ ಉದ್ಯೋಗಿಯ ಗ್ರಾಚ್ಯುಟಿ ಮತ್ತು ಪಿಎಫ್ ಮೊತ್ತದಲ್ಲಿ ಏರಿಕೆಯಾಗುತ್ತದೆ.

12 ಗಂಟೆಗಳ ಕೆಲಸ: ಹೊಸ ಕರಡಿನ ಪ್ರಕಾರ ಉದ್ಯೋಗಿಗಳು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡಬೇಕು. ಹಾಗಂತ ಅವರು ವಾರದಲ್ಲಿ 6 ದಿನ ಕೆಲಸ ಮಾಡಬೇಕಾಗಿಲ್ಲ. ಪ್ರತಿನಿತ್ಯ 12 ಗಂಟೆಗಳಂತೆ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡಿಸಿಕೊಳ್ಳಲಾಗುತ್ತದೆ.

48 ಗಂಟೆಗಳ ಸಾಪ್ತಾಹಿಕ ಕೆಲಸದ ಅವಶ್ಯಕತೆಯಿದೆ ಎಂದು ಕಾರ್ಮಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಹೊಸ ವೇತನ ಸಂಹಿತೆ ಅನುಷ್ಠಾನವಾದ್ರೆ ಅರ್ನ್ಡ್ ಲೀವ್(ಇಎಲ್‌) ನೀತಿಯಲ್ಲಿ ಬದಲಾವಣೆ…….ಉದ್ಯೋಗಿಗಳಿಗೆ ಸಿಗ್ತಾ ಇದ್ದ ಇಎಲ್‌ಗಳಲ್ಲೂ ಬದಲಾವಣೆ ಆಗಬಹುದು.

ಸದ್ಯ ಸರ್ಕಾರಿ ಇಲಾಖೆಗಳಲ್ಲಿ ವರ್ಷಕ್ಕೆ 30 ರಜೆಗಳನ್ನು ನೀಡಲಾಗುತ್ತದೆ. ರಕ್ಷಣಾ ನೌಕರರು ಮಾತ್ರ ವರ್ಷಕ್ಕೆ 60 ರಜೆಗಳನ್ನು ಪಡೆಯುತ್ತಾರೆ. ಉದ್ಯೋಗಿಗಳು ಕ್ಯಾರಿ ಫಾರ್ವರ್ಡ್‌ನಲ್ಲಿ 300 ರಜಾ ದಿನಗಳನ್ನು ಪಡೆಯಬಹುದು. ಹೊಸ ನಿಯಮದ ಅಡಿ ಇವುಗಳನ್ನು 450ಕ್ಕೆ ಹೆಚ್ಚಿಸಲು ಕಾರ್ಮಿಕ ಒಕ್ಕೂಟವು ಒತ್ತಾಯಿಸುತ್ತಿದೆ. ಸದ್ಯ ವಿವಿಧ ಇಲಾಖೆಗಳಲ್ಲಿ 240 ರಿಂದ 300 ರಜೆಗಳಿವೆ. ನೌಕರರು 20 ವರ್ಷಗಳ ಸೇವೆಯ ನಂತರ ಮಾತ್ರ ಈ ರಜಾದಿನಗಳನ್ನು ನಗದು ರೂಪದಲ್ಲಿ ತೆಗೆದುಕೊಳ್ಳಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...