ರಾಮನಗರ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ಬೆನ್ನಲ್ಲೇ ರಾಜ್ಯದಲ್ಲಿ ಒಂದೊಂದೆ ಅಕ್ರಮಗಳು ಬಯಲಾಗುತ್ತಿದ್ದು, ರಾಮನಗರ, ಬೆಂಗಳೂರು ಗ್ರಾಮಾಂತರ ಬಮೂಲ್ ನೇಮಕಾತಿಯಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ಆರೋಪ ಕೇಳಿಬಂದಿದೆ.
2021ರ ಡಿಸೆಂಬರ್ 12ರಂದು ಬಮೂಲ್ ನಲ್ಲಿನ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶದ ಹೊಣೆಹೊತ್ತಿದ್ದ ಮೈಸೂರು ವಿಶ್ವವಿದ್ಯಾಲಯ ಪಾರದರ್ಶಕವಾಗಿ ಪರೀಕ್ಷೆ ನಡೆಸಿಲ್ಲ. 7ಕ್ಕೂ ಹೆಚ್ಚು ಅಕ್ರಮಗಳು ನಡೆದಿದ್ದು, ಬಮೂಲ್ ವ್ಯವಸ್ಥಾಪಕ ನಿರ್ದೇಶಕರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಸಹಕಾರ ಸಚಿವರಿಗೆ, ಸಂಸದ ಡಿ.ಕೆ.ಸುರೇಶ್ ದೂರು ನೀಡಿದ್ದಾರೆ.
BIG BREAKING: PSI ನೇಮಕಾತಿ ಅಕ್ರಮ; ಬ್ಲೂಟೂತ್ ಮೂಲಕ ಪರೀಕ್ಷಾರ್ಥಿಗಳಿಗೆ ಉತ್ತರ; ಅಕ್ರಮದ ಮತ್ತೊಂದು ವಿಡಿಯೋ ಸಾಕ್ಷ್ಯ ಬಟಾಬಯಲು
ಪರೀಕ್ಷೆಗೆ 30 ನಿಮಿಷ ಮೊದಲು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ನೇಮಕಾತಿ ವಿಚಾರದಲ್ಲಿ ಕೆಲ ಅಭ್ಯರ್ಥಿಗಳಿಂದ ಮೊದಲೇ ಒಡಂಬಡಿಕೆ ಮಾಡಿಕೊಂಡು 15ರಿಂದ 20 ಲಕ್ಷ ನಿಗದಿ ಮಾಡಲಾಗಿದೆ ಅಲ್ಲದೇ ಅಂಕಪಟ್ಟಿಯಲ್ಲಿಯೂ ಕೆಲವರಿಗೆ ಹೆಚ್ಚುವರಿಯಾಗಿ ಬೇಕಾಬಿಟ್ಟಿ ಮಾರ್ಕ್ಸ್ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಬಮೂಲ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಸಾದ್ ರೆಡ್ಡಿಯವರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಸಧ್ಯ ಮರು ಪರೀಕ್ಷೆಗೆ ಆದೇಶಿಸಲಾಗಿದೆ.