alex Certify ತರಬೇತುದಾರನ ಕುತ್ತಿಗೆ ಸೀಳಿ ಕೊಂದ ಕರಡಿ: ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಬೇತುದಾರನ ಕುತ್ತಿಗೆ ಸೀಳಿ ಕೊಂದ ಕರಡಿ: ಭಯಾನಕ ಹಳೆ ವಿಡಿಯೋ ಮತ್ತೆ ವೈರಲ್

ರಾಕಿ ಎಂಬ ಕರಡಿಯು ತನ್ನ ತರಬೇತುದಾರನ ಕುತ್ತಿಗೆಯನ್ನು ಸೀಳಿ ಕೊಂದಿರೋ ಭಯಾನಕ ವಿಡಿಯೋ ಮತ್ತೆ ವೈರಲ್ ಆಗಿದೆ.

2008ರಲ್ಲಿ ನಡೆದ ಘಟನೆ ಇದಾಗಿದ್ದು, 14 ವರ್ಷಗಳ ನಂತರ ಈ ವಿಡಿಯೋ ಕಾಣಿಸಿಕೊಂಡಿದೆ. ಈ ದಾಳಿ ಸಂಭವಿಸಿದಾಗ ತರಬೇತುದಾರ ಸ್ಟೀಫನ್ ಮಿಲ್ಲರ್ ಕರಡಿಯೊಂದಿಗೆ ವಾಣಿಜ್ಯ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದರು. ಚಿತ್ರೀಕರಣವು ವೆಸ್ಟ್ ವರ್ಜೀನಿಯಾದ ಪ್ರಿಡೇಟರ್ಸ್ ಇನ್ ಆಕ್ಷನ್ ಫೆಸಿಲಿಟಿಯಲ್ಲಿ ಇವರಿಬ್ಬರ ನಡುವೆ ಒಂದು ಹಂತದ ಕುಸ್ತಿ ಪಂದ್ಯವನ್ನು ಒಳಗೊಂಡಿತ್ತು.

ರಾಕಿ ತರಬೇತಿ ಪಡೆದ ಪ್ರಾಣಿಯಾಗಿದ್ದರೂ, ಚಿತ್ರೀಕರಣದ ಸಮಯದಲ್ಲಿ ದಿಗ್ಭ್ರಮೆಗೊಂಡಿತ್ತು. ಈ ವೇಳೆ ಕೋಪಗೊಂಡು ಅದು ಸ್ಟೀಫನ್ ಮೇಲೆ ದಾಳಿ ಮಾಡಿತ್ತು. ಕರಡಿಯು ತರಬೇತುದಾರ ಸ್ಟೀಫನ್ ನ ಕುತ್ತಿಗೆಗೆ ಕಚ್ಚಿ ಎಳೆದಾಡಿತ್ತು.

ಈ ಭೀಕರ ಘಟನೆಗೆ ಸಾಕ್ಷಿಯಾದ ಪ್ರೇಕ್ಷಕರು ಸ್ಟೀಫನ್‌ನ ಸಹಾಯಕ್ಕೆ ಧಾವಿಸಿದ್ರು. ಘಟನಾ ಸ್ಥಳದಲ್ಲಿದ್ದ ಸ್ಟೀಫನ್ ಅವರ ಸೋದರ ಸಂಬಂಧಿ ರಾಂಡಿ ಮಿಲ್ಲರ್,  ತರಬೇತುದಾರನನ್ನು ರಕ್ಷಿಸುವ ಪ್ರಯತ್ನದಲ್ಲಿ ಕರಡಿಗೆ ಬೆತ್ತದಿಂದ ಹೊಡೆದಿದ್ದಾರೆ. ಇತರ ಸಿಬ್ಬಂದಿ ರಾಕಿಯನ್ನು ತಡೆಯಲು ಪೆಪ್ಪರ್ ಸ್ಪ್ರೇ ಎಸೆದಿದ್ದರು.

ಕೊನೆಗೂ ಸ್ಟೀಫನ್ ತನ್ನನ್ನು ಕರಡಿ ದಾಳಿಯುಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದ. ಆದರೆ, ತೀವ್ರ ರಕ್ತಸ್ರಾವ ಸಂಭವಿಸಿದ ಪರಿಣಾಮ ಕೆಲವೇ ನಿಮಿಷಗಳಲ್ಲಿ ಅವರು ನಿಧನ ಹೊಂದಿದ್ದರು. ಸ್ಟೀಫನ್ ಅವರನ್ನು ಕರಡಿ ಕಚ್ಚಿ ಎಳೆದಾಡಿದ್ದನ್ನು ಕಂಡು ನೆರೆದಿದ್ದವರು ಆಘಾತಗೊಂಡಿದ್ದರು.

ಅಪಘಾತದ ಬಗ್ಗೆ ಕ್ಯಾಲಿಫೋರ್ನಿಯಾ ಡಿಪಾರ್ಟ್ಮೆಂಟ್ ಆಫ್ ಫಿಶ್ ಅಂಡ್ ಗೇಮ್ನಿಂದ ತನಿಖೆಯನ್ನು ಪ್ರಾರಂಭಿಸಲಾಯಿತು. ಸ್ಟೀಫನ್ ಸಾವು ಕೇವಲ ಅಪಘಾತ ಎಂದು ಅದು ತೀರ್ಮಾನಿಸಿತು. ನಂತರ, ರಾಕಿಯನ್ನು ದಯಾಮರಣದಿಂದ ರಕ್ಷಿಸಲಾಯಿತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...