alex Certify ಶಾಕಿಂಗ್​: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೀಲಿ ಚಿತ್ರಗಳಿಗೂ ಬಂದಿದೆ ವಿಶೇಷ ಕೋರ್ಸ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ನೀಲಿ ಚಿತ್ರಗಳಿಗೂ ಬಂದಿದೆ ವಿಶೇಷ ಕೋರ್ಸ್​…..!

ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ‘ಹಾರ್ಡ್‌ಕೋರ್ ಪೋರ್ನೋಗ್ರಫಿ’ ಎಂಬ ಕೋರ್ಸ್ ಅನ್ನು ಅಧ್ಯಯನ ಮಾಡಲು ಅವಕಾಶವನ್ನು ನೀಡಲಾಗುತ್ತಿದೆ.
ಅಮೆರಿಕದ ಉಠಾಹ್​​ನ ಸಾಲ್ಟ್​ ಲೇಕ್​ ಸಿಟಿಯಲ್ಲಿರುವ ವೆಸ್ಟ್​ ಮಿನಿಸ್ಟರ್​ ಕಾಲೇಜು ಮೊದಲ ಬಾರಿಗೆ ಇಂತಹದ್ದೊಂದು ಕೋರ್ಸ್ ಆರಂಭಿಸಿದೆ. ಈ ಕೋರ್ಸ್​ನಲ್ಲಿ ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಜೊತೆ ಕುಳಿತು ನೀಲಿ ಚಿತ್ರಗಳನ್ನು ವೀಕ್ಷಿಸುತ್ತಾರೆ ಎನ್ನಲಾಗಿದೆ.

ನಾವು ಒಟ್ಟಾಗಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತೇವೆ. ಹಾಗೂ ಜನಾಂಗ​, ವರ್ಗ, ಲಿಂಗ ಹಾಗೂ ಲೈಂಗಿಕತೆಯ ಬಗ್ಗೆ ಪ್ರಾಯೋಗಿಕವಾಗಿ ಚರ್ಚೆ ನಡೆಸುತ್ತೇವೆ ಎಂದು ಈ ಕೋರ್ಸ್​ಗೆ ವಿವರಣೆ ನೀಡಲಾಗಿದೆ.

Credit: Alamy

ಆದರೆ ಕೆಲವರಿಗೆ ಈ ಹೊಸ ಕೋರ್ಸ್ ಸಂಪೂರ್ಣವಾಗಿ ಇಷ್ಟವಾದಂತೆ ಕಾಣುತ್ತಿಲ್ಲ. ಬಳಕೆದಾರರೊಬ್ಬರು ಇದನ್ನು ನೀವು ಕಲಾ ಪ್ರಕಾರ ಎಂದು ಕರೆದು ಸೋತಿದ್ದೀರಿ ಎಂದು ಬರೆದುಕೊಂಡಿದ್ದಾರೆ. ಇನ್ನು ಅನೇಕರು ಈ ರೀತಿ ಒಟ್ಟಾಗಿ ಕುಳಿತು ಅಶ್ಲೀಲ ಸಿನಿಮಾಗಳನ್ನು ವೀಕ್ಷಿಸುವುದು ಸಂಪೂರ್ಣವಾಗಿ ಅಸಹ್ಯಕರವಾಗಿದೆ ಎಂದು ಹೀಯಾಳಿಸಿದ್ದಾರೆ.

ಇನ್ನೊಬ್ಬ ಟ್ವೀಟಿಗರು, ಜಗತ್ತಿನಲ್ಲಿ ಕಾನೂನು ಬದ್ಧವಾಗಿ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಕಲಿಯಲು ಸ್ಫೂರ್ತಿದಾಯಕವಾದಂತಹ ಸಾಕಷ್ಟು ವಿಷಯಗಳು ಇರುವಾಗ, ವಿದ್ಯಾರ್ಥಿಗಳಿಗೆ ಈ ರೀತಿಯ ಕೊಳಕು ವಿಚಾರವನ್ನು ಕಲಿಸುವುದು ಏಕೆ ಎಂದು ಪ್ರಶ್ನಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...