alex Certify ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಕೊನೆ ಹಂತದ ಮತದಾನ, ಕುತೂಹಲಕ್ಕೆ ಬೀಳಲಿದೆ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಕೊನೆ ಹಂತದ ಮತದಾನ, ಕುತೂಹಲಕ್ಕೆ ಬೀಳಲಿದೆ ತೆರೆ

ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಎರಡನೇ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ. ಮುಂದಿನ ಐದು ವರ್ಷಗಳ ಕಾಲ ಫ್ರಾನ್ಸ್ ದೇಶವನ್ನು ಯಾರು ಆಳುತ್ತಾರೆ ಅನ್ನೋದು ನಿರ್ಧಾರವಾಗಲಿದೆ. ಯುರೋಪಿಯನ್ – ಕೇಂದ್ರೀಯ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಮರೀನ್ ಲೆ ಪೆನ್ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬಹುತೇಕ ಎಲ್ಲಾ ಸಮೀಕ್ಷೆಗಳ ಪ್ರಕಾರ 44ರ ಹರೆಯದ ಮ್ಯಾಕ್ರನ್ ಗೆಲುವು ಸಾಧಿಸಲಿದ್ದಾರಂತೆ. ಆದರೆ ಎಷ್ಟು ಮತಗಳ ಅಂತರದಿಂದ ಎದುರಾಳಿಯನ್ನು ಸೋಲಿಸಬಹುದು ಎಂಬ ಗೊಂದಲವಿದೆ. 2017ರಲ್ಲಿ ಅವರು ಶೇ.66.1 ರಷ್ಟು ಮತಗಳಿಂದ ಲೆ ಪೆನ್ ಅವರನ್ನು ಪರಾಭವಗೊಳಿಸಿದ್ದರು. ಆದ್ರೆ ಈ ಬಾರಿ ಅಂತರ ಕಡಿಮೆ ಇರಲಿದೆ ಎನ್ನಲಾಗ್ತಿದೆ.

ಯಾವ ಅಭ್ಯರ್ಥಿಗೂ ಅಂತಹ ಕಟ್ಟಾ ಬೆಂಬಲಿಗರಿಲ್ಲ. ಪರಸ್ಪರರ ವೀಕ್‌ ಪಾಯಿಂಟ್‌ಗಳೇ ಚುನಾವಣಾ ಅಸ್ತ್ರಗಳಾಗಿವೆ. ತನಗಿಂತ ಮತ್ತೊಬ್ಬ ಅಭ್ಯರ್ಥಿ ಯಾವ ಮಟ್ಟಿಗೆ ಅನರ್ಹ ಎಂಬುದನ್ನು ಇವರು ಸಾಬೀತು ಮಾಡಬೇಕಷ್ಟೆ. ಇಲ್ಲಿ ಎಡಪಂಥೀಯರ ನಿರ್ಧಾರಗಳೇ ಫಲಿತಾಂಶಕ್ಕೆ ನಿರ್ಣಾಯಕ. ಆದರೆ  ಎಡಪಂಥೀಯರು ಇಕ್ಕಟ್ಟಿನಲ್ಲಿದ್ದಾರೆ, ಕೇಂದ್ರವಾದಿ ಮ್ಯಾಕ್ರನ್‌ರನ್ನು ಅವರು ಇಷ್ಟಪಡುವುದಿಲ್ಲ, ಆದರೆ ಬಲಪಂಥೀಯರಾಗಿರೋದ್ರಿಂದ ಲೆ ಪೆನ್‌ಗೆ ಮತ ಹಾಕಲು ಬಯಸುವುದಿಲ್ಲ.

ಮ್ಯಾಕ್ರನ್ ಗೆದ್ದರೆ ಎರಡನೇ ಬಾರಿ ಜನಾದೇಶ ಪಡೆದಂತಾಗುತ್ತದೆ. ಎಲ್ಲಾ ವರ್ಗದ ಮತದಾರರಿಗೆ ಪಿಂಚಣಿ ಸೇರಿದಂತೆ ವ್ಯಾಪಾರ ವಹಿವಾಟಿನಲ್ಲಿ ಸುಧಾರಣೆ ತರುವ ಕಠಿಣ ಸವಾಲು ಅವರ ಮುಂದಿದೆ. ಲೆ ಪೆನ್ ಗೆದ್ದರೆ, ಫ್ರಾನ್ಸ್‌ನ ದೇಶೀಯ ಮತ್ತು ಅಂತರಾಷ್ಟ್ರೀಯ ನೀತಿಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ನಿರೀಕ್ಷಿಸಬಹುದು.

ಬೀದಿ ಬೀದಿಗಳಲ್ಲಿ ಪ್ರತಿಭಟನೆಗಳು ತಕ್ಷಣವೇ ಪ್ರಾರಂಭವಾಗಬಹುದು. ಜೂನ್‌ನಲ್ಲಿ ನಡೆಯಲಿರುವ ಸಂಸತ್ ಚುನಾವಣೆಯಲ್ಲಿ ಗೆಲ್ಲುವುದು ವಿಜೇತರ ಮುಂದಿರುವ ಮೊದಲ ಸವಾಲಾಗಿದೆ. ಇಂಧನ ಬೆಲೆ ಏರಿಕೆ, ಹಣದುಬ್ಬರ ನಿಯಂತ್ರಣ ಇವು ಫ್ರಾನ್ಸ್‌ನ ನೂತನ ಅಧಿಪತಿಯ ಮುಂದಿರೋ ಬಹುದೊಡ್ಡ ಸವಾಲು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...