ಭುವನೇಶ್ವರ: ವಂಡರ್ ಕಿಡ್ ಎಂದೇ ಜನಪ್ರಿಯವಾಗಿರುವ 2.5 ವರ್ಷದ ಅನ್ವಿ ಅಗರವಾಲ್ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರಿಗೆ ತನ್ನ ಪೇಂಟಿಂಗ್ ಅನ್ನು ಉಡುಗೊರೆಯಾಗಿ ನೀಡಿದ್ದಾಳೆ.
ಇಷ್ಟು ಚಿಕ್ಕ ವಯಸ್ಸಿನಲ್ಲೇ 72 ಪೇಂಟಿಂಗ್‌ಗಳನ್ನು ಹೊಂದಿರುವ ಪುಟ್ಟ ಪೋರಿ, ಅವುಗಳಲ್ಲಿ ಒಂದನ್ನು ಒಡಿಶಾ ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಿದ್ದಾಳೆ. ಬಾಲೆ ಅನ್ವಿ ಅಗರವಾಲ್ ಲಂಡನ್‌ನ ಬುಕ್ ಆಫ್ ರೆಕಾರ್ಡ್ಸ್‌ನಿಂದ ಚಿತ್ರಕಲೆಗೆ ಸಂಬಂಧಪಟ್ಟಂತೆ ಹಲವಾರು ಮನ್ನಣೆಗಳನ್ನು ಪಡೆದಿದ್ದಾರೆ.
ಅನ್ವಿ, ತನ್ನ ತಾಯಿ ಅನುರಾಧಾ ದಾಲ್ಮಿಯಾ ಅಗರವಾಲ್ ಜೊತೆಗೆ ನವೀನ್ ಪಟ್ನಾಯಕ್ ರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಹಾಗೂ ಅವರ ವಿಶಿಷ್ಟ ವರ್ಣಚಿತ್ರಗಳನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ.
ಮಗುವಿನ ಅಪರೂಪದ ಸಾಧನೆಯಿಂದ ಸಂತೋಷಗೊಂಡ ಮುಖ್ಯಮಂತ್ರಿ ತಮ್ಮ ಹಸ್ತಾಕ್ಷರದ ಭಾವಚಿತ್ರವನ್ನು ನೀಡಿ ಆಶೀರ್ವದಿಸಿದ್ದಾರೆ. ಪ್ರಸ್ತುತ ಭುವನೇಶ್ವರದಲ್ಲಿ ತನ್ನ ಪೋಷಕರೊಂದಿಗೆ ನೆಲೆಸಿರುವ ಅನ್ವಿ 72 ಪೇಂಟಿಂಗ್‌ಗಳನ್ನು ರಚಿಸಿದ್ದಾಳೆ.