ಬಾತುಕೋಳಿಯನ್ನು ಅನುಕರಿಸಿದ ಯುವತಿಯರು; ವಿಡಿಯೋ ಫುಲ್ ವೈರಲ್..! 23-04-2022 1:48PM IST / No Comments / Posted In: Featured News, Live News, Entertainment ಪ್ರಾಣಿ-ಪಕ್ಷಿಗಳ ತಮಾಷೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತದೆ. ಇವುಗಳ ಮುದ್ದುತನದಿಂದ ಕೂಡಿದ ದೃಶ್ಯ ವೀಕ್ಷಿಸುವುದೇ ಖುಷಿಯ ವಿಚಾರ. ಇದೀಗ ಸರೋವರದಲ್ಲಿ ಬಾತುಕೋಳಿಯು ಈಜುತ್ತಾ ಕುಣಿಯುವಂತೆ, ಯುವತಿಯರಿಬ್ಬರು ಕೂಡ ಅದೇ ರೀತಿ ಅನುಕರಿಸಿರುವ ವಿಡಿಯೋ ವೈರಲ್ ಆಗಿದೆ. ಬಾತುಕೋಳಿಯು ಸರೋವರದ ಸುತ್ತಲೂ ಈಜುತ್ತಾ ತನ್ನದೇ ಶೈಲಿಯಲ್ಲಿ ಕುಣಿದಿದೆ. ಅದು ಆಹಾರಕ್ಕಾಗಿ ಕೆಳಭಾಗವನ್ನು ಹುಡುಕುತ್ತದೆ ಅಥವಾ ನೀರಿನ ಅಡಿಯಲ್ಲಿ ಧುಮುಕುತ್ತದೆ. ಇದೀಗ ಇಬ್ಬರು ಯುವತಿಯರು ಬಾತುಕೋಳಿಗಳ ಮ್ಯಾನರಿಸಂ ಅನ್ನು ಅನುಕರಿಸಿದ್ದು, ಅದರಂತೆಯೇ ಮಾಡಿದ್ದಾರೆ. ಇದು ನಿಮ್ಮನ್ನು ನಗಿಸುವುದು ಖಚಿತ. ಟ್ವಿಟ್ಟರ್ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಸ್ಮ್ಯಾಕ್ ಮೆಕ್ಕ್ರಿನರ್ ಮತ್ತು ಮಾಲಿಯಾ ಬೇಕರ್ ಎಂಬ ಯುವತಿಯರು ಬಾತುಕೋಳಿಗಳ ಕ್ರಿಯೆಗಳನ್ನು ಅನುಕರಿಸಿದ್ದಾರೆ. ಸ್ಮ್ಯಾಕ್ ತನ್ನ ದೇಹವನ್ನು ಬಾತುಕೋಳಿಯಂತೆ ಚಲಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಬಾತುಕೋಳಿಯ ಕ್ರಿಯೆಗಳನ್ನು ಅನುಕರಿಸುವ ಮೂಲಕ ಮಾಲಿಯಾ ಕೂಡ ಆಕೆಯೊಂದಿಗೆ ಸೇರಿಕೊಂಡಿದ್ದಾಳೆ. ಇಬ್ಬರೂ ಟೋಪಿಯ ಜೊತೆಗೆ ಕಪ್ಪು ಮತ್ತು ಬಿಳಿ ಬಟ್ಟೆಗಳನ್ನು ಧರಿಸಿದ್ದಾರೆ. ವಿಡಿಯೋವನ್ನು ಕೆಲವು ದಿನಗಳ ಹಿಂದೆ ಸ್ಮ್ಯಾಕ್ ಮೆಕ್ಕ್ರಿನರ್ ಅವರು ಟ್ವಿಟ್ಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಏಪ್ರಿಲ್ 19 ರಂದು ಹಂಚಿಕೊಳ್ಳಲಾದ ವಿಡಿಯೋ ಭರ್ಜರಿಯಾಗಿ ಸದ್ದು ಮಾಡಿದೆ. ಇದನ್ನು ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಅನೇಕರು ಉಲ್ಲಾಸದ ಪ್ರತಿಕ್ರಿಯೆಗಳೊಂದಿಗೆ ಕಾಮೆಂಟ್ ವಿಭಾಗದಲ್ಲಿ ಬಾಂಬ್ ಸಿಡಿಸಿದ್ದಾರೆ. Choreo by Birds, ft. me and Malia Baker 👌 pic.twitter.com/GmBSdgVOwZ — Smac McCreanor (@smacmccreanor) April 19, 2022