ಕೋವಿಡ್ ಸೋಂಕಿಗೆ ಒಳಗಾಗಿದ್ದ ಬ್ರಿಟನ್ನಿನ ರೋಗಿಯೊಬ್ಬರು ಸತತ ಒಂದೂವರೆ ವರ್ಷಗಳ ಕಾಲ ದೀರ್ಘವಾಗಿ ಕೋವಿಡ್ ಸೋಂಕು ಹೊಂದಿದ್ದರು ಎಂದು ವಿಜ್ಞಾನಿಗಳ ಅಧ್ಯಯನವೊಂದು ತಿಳಿಸಿದೆ.
ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಹೊಂದಿದ ನಾಗರಿಕರನ್ನು ಕೋವಿಡ್ ಸೋಂಕಿನಿಂದ ರಕ್ಷಿಸಬೇಕೆಂದು ಈ ಪ್ರಕರಣ ಸೂಚಿಸುತ್ತದೆ.
ವಿದೇಶಗಳಲ್ಲಿ ಹೆಚ್ಚಾಗ್ತಿದೆ ಭಾರತೀಯರ ಆತ್ಮಹತ್ಯೆ ಪ್ರಕರಣ, ಬೆಚ್ಚಿಬೀಳಿಸುತ್ತೆ 8 ವರ್ಷಗಳ ಈ ಅಂಕಿ-ಅಂಶ…..!
ದೀರ್ಘಕಾಲದ ಸೋಂಕು ಇರುವವರಲ್ಲಿ ಯಾವ ರೂಪಾಂತರಿಗಳು ವಿಕಸನಗೊಳ್ಳುತ್ತದೆ ಎಂದು ತಂಡ ತನಿಖೆ ನಡೆಸಿದೆ. ಕೋವಿಡ್ ಪಾಸಿಟಿವ್ ಹೊಂದಿದ 8 ವ್ಯಕ್ತಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಈ ವ್ಯಕ್ತಿಗಳು ದುರ್ಬಲ ಪ್ರತಿಕಾಯ ವ್ಯವಸ್ಥೆಯನ್ನು ಹೊಂದಿದ್ದು ಅಂಗಾಂಗ ಕಸಿ, ಹೆಚ್ಐವಿ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಪುನರಾವರ್ತಿತ ಪರೀಕ್ಷೆಗಳಿಂದ ಅವರಲ್ಲಿ 73 ದಿನಗಳವರೆಗೂ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು.
ನಿರಂತರ ಕೋವಿಡ್ ಸೋಂಕು ಮತ್ತು ದೀರ್ಘಕಾಲದ ಕೋವಿಡ್ ಸೋಂಕು ಭಿನ್ನವಾಗಿದ್ದು ದೀರ್ಘಕಾಲದಲ್ಲಿ ವೈರಸ್ ಮುಕ್ತವಾದ ಬಳಿಕವೂ ರೋಗಲಕ್ಷಣಗಳು ಗೋಚರಿಸುತ್ತವೆ. ನಿರಂತರ ಕೋವಿಡ್ ಪ್ರಕರಣಗಳಲ್ಲಿ ವೈರಸ್ ಪುನರಾವರ್ತನೆಯಾಗುತ್ತದೆ ಎಂದು ಸ್ನೆಲ್ ತಿಳಿಸಿದ್ದಾರೆ.