ಡಿಜಿಟಲೀಕರಣದ ನಂತರ ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಂಚನೆಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ವಂಚನೆ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿರುವ ಬಗ್ಗೆ ದೇಶದ ಅತಿ ದೊಡ್ಡ ಸಾರ್ವಜನಿಕ ಬ್ಯಾಂಕ್ ಎಸ್ ಬಿ ಐ ಕಳವಳ ವ್ಯಕ್ತಪಡಿಸಿದೆ. ಈ ಕುರಿತು ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಎರಡು ಆಯ್ದ ಮೊಬೈಲ್ ಸಂಖ್ಯೆಗಳಿಂದ ಬರುವ ಕರೆಗಳಿಗೆ ಉತ್ತರ ನೀಡದಿರುವಂತೆ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಕೆವೈಸಿ ಅಪ್ಡೇಟ್ಗಾಗಿ +91 8294710946 ಹಾಗೂ +917362951973 ಮೊಬೈಲ್ ಸಂಖ್ಯೆಗಳಿಂದ ಕರೆಗಳು ಬಂದರೆ ಸ್ವೀಕರಿಸದಂತೆ ಗ್ರಾಹಕರಿಗೆ ಮನವಿ ಮಾಡಿದೆ.
ಈ ಎರಡು ಮೊಬೈಲ್ ಸಂಖ್ಯೆಗಳು ಬ್ಯಾಂಕ್ ನೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲವೆಂದು ಎಸ್ ಬಿ ಐ ಸ್ಪಷ್ಟಪಡಿಸಿದೆ. ಇತ್ತೀಚಿಗೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಎರಡು ಮೊಬೈಲ್ ಸಂಖ್ಯೆಗಳಿಂದ ಫಿಶಿಂಗ್ ಕರೆಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಲು ಎಸ್ ಬಿ ಐ ತನ್ನ ಗ್ರಾಹಕರಿಗೆ ವಿನಂತಿಸಿದೆ. ಈ ಎರಡು ಮೊಬೈಲ್ ಸಂಖ್ಯೆಗಳಿಂದ ಗ್ರಾಹಕರಿಗೆ ಸಾಕಷ್ಟು ವಂಚನೆ ನಡೆದಿರುವುದನ್ನು ಗಮನಿಸಿರುವುದಾಗಿ ಅದು ತಿಳಿಸಿದೆ.
ವೇಗವಾಗಿ ಚಲಿಸುತ್ತಿರುವ ರೈಲನ್ನು ಸಮೀಪದಿಂದ ನೀವೂ ನೋಡ್ತಿರಾ…? ಹಾಗಾದ್ರೆ ಒಮ್ಮೆ ನೋಡಿ ಬೆಚ್ಚಿಬೀಳಿಸುವ ಈ ವಿಡಿಯೋ
ಟ್ವಿಟರ್ನಲ್ಲಿ ಎಸ್ ಬಿ ಐ ಎಚ್ಚರಿಕೆಯ ಸಂದೇಶ ಪ್ರಕಟಿಸಿದ್ದು ಗ್ರಾಹಕರು ಇಂತಹ ವಿಷಯಗಳನ್ನು ತಮ್ಮ ಇಮೇಲ್ ಖಾತೆ report.phishing@sbi.co.in ನಲ್ಲಿ ವರದಿ ಮಾಡಬಹುದು ಎಂದು ತಿಳಿಸಿದೆ. ಯಾವುದೇ ಬ್ಯಾಂಕ್ ಗಳು KYC ಅಪ್ಡೇಟ್ ಮಾಡಲು ಕರೆಗಳು ಸಂದೇಶಗಳು ಅಥವಾ ಇಮೇಲ್ ಗಳನ್ನು ಕಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಇತ್ತೀಚಿಗೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಯಾವುದೇ ಅನುಮಾನಾಸ್ಪದ ಕರೆಗಳನ್ನು ಸ್ವೀಕರಿಸದಂತೆ ಗ್ರಾಹಕರು ಎಚ್ಚರದಿಂದ ಇರಬೇಕಾಗಿ ಎಸ್ ಬಿ ಐ ತಿಳಿಸಿದೆ.