ಗುಜರಾತ್‌ನ ಗಾಂಧಿಧಾಮದಲ್ಲಿ ಸುಮಾರು 2000 ಕೋಟಿ ಮೌಲ್ಯದ ಹೆರಾಯಿನ್ ಪತ್ತೆಯಾಗಿದೆ. ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಗುಪ್ತಚರ ಇಲಾಖೆ ನಿರ್ದೇಶನಾಲಯ (ಡಿಆರ್‌ಐ) ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ, ಹೆರಾಯಿನ್ ಅನ್ನು ಕಂಟೇನರ್‌ಗಳಲ್ಲಿ ಬಚ್ಚಿಡಲಾಗಿತ್ತು.
ಅಧಿಕಾರಿಗಳು ಗಾಂಧಿಧಾಮ್‌ನ ಕಾಂಡ್ಲಾ ಬಂದರಿನಿಂದ ಸುಮಾರು 16 ಕಿಮೀ ದೂರದಲ್ಲಿರುವ ಖಾಸಗಿ ಕಂಪನಿ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ಕಂಪನಿಯ ಆವರಣದಲ್ಲಿ ಬಚ್ಚಿಟ್ಟಿದ್ದ ಭಾರೀ ಪ್ರಮಾಣದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಅಫ್ಘಾನಿಸ್ತಾನದಿಂದ ತರಲಾಗಿದ್ದು, ಪುಡಿಯ ರೂಪದಲ್ಲಿದೆಯಂತೆ.
ಒಂದು ಕಂಟೇನರ್‌ನಲ್ಲಿ ಸುಮಾರು 300 ಕೆಜಿಯಷ್ಟು ಡ್ರಗ್ಸ್ ತುಂಬಿಸಿ ಇಡಲಾಗಿತ್ತು. ಇದರ ಮೌಲ್ಯ ಬರೋಬ್ಬರಿ 2000 ಕೋಟಿ ರೂಪಾಯಿ. ಭಾರೀ ಪ್ರಮಾಣದ ಡ್ರಗ್ಸ್ ಪತ್ತೆಯಾಗಿರೋದನ್ನು ನೋಡಿ ರಹಸ್ಯ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹೆರಾಯಿನ್ ಅನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ. ಈ ಜಾಲದ ಕಿಂಗ್‌ಪಿನ್‌ಗಾಗಿ ಬಲೆ ಬೀಸಿದ್ದಾರೆ.