ಇಂದು ವಿಶ್ವ ಭೂ ದಿನಾಚರಣೆ ಆಚರಿಸಲಾಗುತ್ತಿದೆ. ಇದರ ಮಧ್ಯೆ ಈ ಸಂಗತಿ ಬಹಳ ಕಳವಳಕಾರಿಯಾಗಿದೆ. ಪ್ರತಿ ವರ್ಷ 24 ಬಿಲಿಯನ್ ಟನ್ ಫಲವತ್ತಾದ ಭೂಮಿ ಬರಡು ಭೂಮಿಯಾಗಿ ಮಾರ್ಪಡುತ್ತಿದೆ ಅಂತಾ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ.
ಫಲವತ್ತಾದ ಭೂಮಿ ಮರುಭೂಮಿಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಬರ ಹಾಗೂ ಮರುಭೂಮೀಕರಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿದ್ದು, ಅದ್ರಲ್ಲೂ ಆಫ್ರಿಕಾದಲ್ಲಿ ಬರ ತಾಂಡವವಾಡ್ತಿದೆ.
ಇದೇ ವೇಳೆ ಬರ ಮತ್ತು ಮರುಭೂಮೀಕರಣವನ್ನು ವ್ಯವಸ್ಥಿತ ಯೋಜನೆ ಮೂಲಕ ತಡೆಯಬಹುದು. ಈ ಬಗ್ಗೆ ಜಾಗೃತಿ ಮೂಡಬೇಕಿದೆ. ಕಳೆದ 25 ವರ್ಷಗಳ ಹಿಂದೆಯೇ ವಿಶ್ವ ಬರ ಮತ್ತು ಮರುಭೂಮೀಕರಣ ತಡೆ ದಿನಾಚರಣೆಯನ್ನು ವಿಶ್ವಸಂಸ್ಥೆ ಪ್ರಾರಂಭಿಸಿ, ಫಲವತ್ತಾದ ಭೂಮಿ ನಷ್ಟವಾದರೆ ಅದರಿಂದಾಗುವ ಭೀಕರ ಪರಿಣಾಮ ಕುರಿತು ಜಾಗೃತಿ ಮೂಡಿಸಲು ಮುಂದಾಗಿದೆ.