ಜಹಾಂಗೀರ್ ಪುರಿ: ಅಕ್ರಮ ಕಟ್ಟಡಗಳ ನೆಲಸಮ ಅಭಿಯಾನ ಅಡಿಯಲ್ಲಿ ಬುಲ್ಡೋಜರ್ ನಿಂದ ಎಷ್ಟೋ ಕಟ್ಟಡಗಳು ನೆಲಕ್ಕುರುಳಿದ್ದು, ಎಷ್ಟೋ ಮಂದಿಯ ಬದುಕು ಬೀದಿಗೆ ಬಂದಿದೆ. ಈ ನಡುವೆ ಕಟ್ಟಡದ ಕಲ್ಲು ಮಣ್ಣು ರಾಶಿಗಳ ನಡುವೆ ಬಾಲಕನೊಬ್ಬ ನಾಣ್ಯಗಳನ್ನು ಆರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಾಣ್ಯಗಳನ್ನು ಆರಿಸುತ್ತಿರುವ ಹುಡುಗನ ತಂದೆ ಜ್ಯೂಸ್ ಕಾರಣಕ್ಕೆ ಉರುಳಿಸಿದ್ದು, ಈ ನಡುವೆ ಅಲ್ಲಿ ಬಿದ್ದಿದ್ದ ನಾಣ್ಯಗಳನ್ನು ಆಯ್ದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತು ದೆಹಲಿ ಪೊಲೀಸರ ಹ್ಯಾಂಡಲ್‌ಗಳನ್ನು ಜನರು ಟ್ಯಾಗ್ ಮಾಡುವ ಮೂಲಕ ಫೋಟೋವನ್ನು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪೋಸ್ಟ್ ಮಾಡಲಾಗಿದೆ.
ಜಹಾಂಗೀರ್ ಪುರಿಯಲ್ಲಿ ಕೋಮು ಹಿಂಸಾಚಾರ ನಡೆದ ಕೆಲ ದಿನಗಳ ನಂತರ ಉತ್ತರ ದೆಹಲಿ ಪ್ರದೇಶಕ್ಕೆ ಬುಲ್ಡೋಜರ್‌ಗಳನ್ನು ಕಳುಹಿಸಿದ ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC) ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಹಲವಾರು ಕಾಂಕ್ರೀಟ್ ಮತ್ತು ತಾತ್ಕಾಲಿಕ ಸೂರು, ಅಂಗಡಿಗಳನ್ನು ನೆಲಸಮಗೊಳಿಸಿದರು.
ಎನ್ ಡಿ ಎಂ ಸಿ ಬುಲ್ಡೋಜರ್‌ಗಳಿಂದ ಧ್ವಂಸಗೊಂಡ ಅಂಗಡಿಗಳ ಪೈಕಿ ಮಾರಾಟಗಾರರೊಬ್ಬರು 1977 ರಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರು ಮಾಡಲಾಗಿತ್ತು ಎಂದು ಹೇಳಿ ಅಧಿಕಾರಿಗಳ ಮುಂದೆ ಮನವಿ ಮಾಡಿದರೂ, ಯಾರೂ ಅವರ ಮಾತನ್ನು ಕೇಳಲಿಲ್ಲ.