alex Certify ಸಾಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಬರಮತಿ ಆಶ್ರಮದಲ್ಲಿ ಚರಕ ತಿರುಗಿಸಿದ ಬ್ರಿಟನ್ ಪ್ರಧಾನಿ

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಇದೇ ಮೊದಲ ಬಾರಿಗೆ ಇಂದಿನಿಂದ ಎರಡು ದಿನಗಳ ಭಾರತ ಭೇಟಿಗಾಗಿ ಗುಜರಾತ್ ನ ಅಹಮದಾಬಾದ್ ಗೆ ಬಂದಿಳಿದಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ನೀಡಿದ್ದಾರೆ. ನಂತರ ಬೋರಿಸ್ ಅವರು ಸಾಬರಮತಿ ಆಶ್ರಮಕ್ಕೆ ತೆರಳಿ ಚರಕದಿಂದ ನೂಲು ತೆಗೆಯುವ ಪ್ರಯತ್ನ ಮಾಡಿದರು.

ಗಾಂಧೀಜಿ ಅನುಯಾಯಿಯಾಗಿದ್ದ ಬ್ರಿಟಿಷ್ ರೇರ್ ಅಡ್ಮಿರಲ್ ಸರ್ ಎಡ್ಮಂಡ್ ಸ್ಟ್ರೇಟ್ ಅವರ ಮಗಳು ಮೀರಾಬೆನ್ ಅವರ ಆತ್ಮಕಥನ ದಿ ಸ್ಪಿರಿಟ್ಸ್ ಪಿಲಿಗ್ರಿಮೇಜ್ ಕೃತಿಯನ್ನು ಸಾಬರಮತಿ ಆಶ್ರಮದ ವತಿಯಿಂದ ಉಡುಗೊರೆಯಾಗಿ ನೀಡಲಾಗಿದೆ. ಇದರೊಂದಿಗೆ ಗಾಂಧೀಜಿಯವರು ಆರಂಭದ ದಿನಗಳಲ್ಲಿ ಬರೆದಿದ್ದ ಗೈಡ್ ಟು ಲಂಡನ್ ಕೃತಿಯನ್ನು ಸಹ ನೀಡಲಾಗಿದೆ.

ಬೋರಿಸ್ ಅವರು ಗುಜರಾತ್ ನ ಪ್ರಮುಖ ಉದ್ಯಮಗಳಿಗೆ ಭೇಟಿ ನೀಡಲಿದ್ದು ಎರಡು ರಾಷ್ಟ್ರಗಳ ವಾಣಿಜ್ಯ ಮತ್ತು ವ್ಯಾಪಾರದ ಬಗ್ಗೆ ಚರ್ಚಿಸಲಿದ್ದಾರೆ.

ನಂತರ ಅವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದಾರೆ. ಭಾರತ ತೈಲ ಮತ್ತು ರಕ್ಷಣಾ ಸಲಕರಣೆಗಳಿಗಾಗಿ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿತಗೊಳಿಸುವ ಕುರಿತು ಚರ್ಚಿಸಲಿದ್ದಾರೆ. ಸಾಫ್ಟವೇರ್ ಇಂಜಿನಿಯರಿಂಗ್, ಫಾರ್ಮಾ ಹಲವು ವಲಯಗಳಲ್ಲಿ ಹೊಸ ಹೂಡಿಕೆ ಮತ್ತು ಆಮದು ಒಪ್ಪಂದಗಳನ್ನು ಬೋರಿಸ್ ಪ್ರಕಟಿಸಲಿದ್ದಾರೆ.

ಉಭಯ ದೇಶಗಳ ನಡುವೆ ವಾಣಿಜ್ಯ ವಹಿವಾಟು ಭದ್ರತಾ ಸಹಕಾರ, ರಷ್ಯಾ ಉಕ್ರೇನ್ ಯುದ್ಧ, ರಾಜತಾಂತ್ರಿಕತೆ, ಆರ್ಥಿಕತೆಯ ಪಾಲುದಾರಿಕೆ ಹಾಗೂ ಮುಕ್ತ ವ್ಯಾಪಾರ ಒಪ್ಪಂದ ವಿಷಯಗಳು ಚರ್ಚೆಗೆ ಬರಲಿವೆ.

— ANI (@ANI) April 21, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...